ರಾಣೆಬೆನ್ನೂರ

ರಾಣೇಬೆನ್ನೂರಿನ ಅಭಿಯಂತರ ಅಶೋಕ ಯೋಗಿಗೆ ಅಲ್ಟ್ರಾಟೆಕ್ ಅವಾರ್ಡ್‌ ಪ್ರದಾನ

ರಾಣೇಬೆನ್ನೂರಿನ ಅಭಿಯಂತರ ಅಶೋಕ ಯೋಗಿಗೆ ಅಲ್ಟ್ರಾಟೆಕ್ ಅವಾರ್ಡ್‌ ಪ್ರದಾನ


ಲೋಕದರ್ಶನ ವರದಿ 

ರಾಣೇಬೆನ್ನೂರ 22: ಹುಬ್ಬಳ್ಳಿಯ ಡೇನಿಸೆನ್ಸ್‌ ಹೋಟೆಲ್ ಸಭಾ ಭವನದಲ್ಲಿ ಪ್ರತಿಷ್ಠಿತ ಅಲ್ಟ್ರಾಟೆಕ್ ಕಂಪನಿಯು ಅಭಿಯಂತರ ಸಾಧಕರ ಅಭಿನಂದನಾ ಅವಾರ್ಡ್‌ ಪ್ರದಾನ ಸಮಾರಂಭವು ಇತ್ತೀಚೆಗೆ ಆಯೋಜಿಸಿತ್ತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರು ರಾಣೇಬೆನ್ನೂರಿನ ಖ್ಯಾತ ಅಭಿಯಂತರ ಮತ್ತು ಕಂಪನಿಯ ನಿರ್ಣಾಯಕ ಸದಸ್ಯರಾದ ಅಶೋಕ ಎಸ್‌. ಯೋಗಿ ಅವರಿಗೆ 2021ನೇ ಸಾಲಿನ ಅಲ್ಟ್ರಾಟೆಕ್ ಅವಾರ್ಡ್‌ ಪ್ರಶಸ್ತಿ ಪದಕವನ್ನಿತ್ತು ಸನ್ಮಾನಿಸಿ ಗೌರವಿಸಿದರು. 

ಈ ಸಂದರ್ಭದಲ್ಲಿ ಕಂಪನಿಯ ಮುಖ್ಯಸ್ಥರು, ವ್ಯವಸ್ಥಾಪಕರು ಸೇರಿದಂತೆ ಸ್ಥಳೀಯ ಅಭಿಯಂತರಾದ ಪ್ರಭು ಮುಂಡಾಸದ, ನಾಗರಾಜ ಪಾಟೀಲ, ಸುರೇಶ್ ಪಾಟೀಲ, ಸುಧಾ ಅ. ಯೋಗಿ ಸೇರಿದಂತೆ ಅಲ್ಟ್ರಾಟೆಕ್ ಕಂಪನಿಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ