ರಷ್ಯಾದ 40 ವಾರ್ ಜೆಟ್ ಉಡಾಯಿಸಿದ ಉಕ್ರೇನ್
Ukraine launches 40 Russian war jets
ಬೆಂಗಳೂರು 02: ಉಕ್ರೇನ್ ಗಡಿಯಿಂದ ಸುಮಾರು 4 ಸಾವಿರ ಕಿ.ಮೀ ದೂರ ಇರುವ ರಷ್ಯಾದ ಸೈಬೀರಿಯಾದಲ್ಲಿನ ಸೇನಾನೆಲೆ ಮೇಲೆ ಉಕ್ರೇನ್ ಪಡೆಗಳು ಭಾನುವಾರ ಡ್ರೋನ್ ದಾಳಿ ನಡೆಸಿರುವುದು ರಷ್ಯಾವನ್ನು ತೀವ್ರವಾಗಿ ಕೆರಳಿಸಿದೆ.
ಈ ದಾಳಿಯಲ್ಲಿ ಯುಸೊಲ್‌ಸ್ಕಿ ಜಿಲ್ಲೆಯ ಸ್ರೆಡ್ನಿ ಗ್ರಾಮದ ಬಳಿಯ ವಾಯುನೆಲೆಗಳಲ್ಲಿ ನಿಂತಿದ್ದ ರಷ್ಯಾದ 40ಕ್ಕೂ ಅಧಿಕ ಯುದ್ಧವಿಮಾನಗಳು ನಾಶವಾಗಿವೆ. ರಷ್ಯಾದ ಮೇಲೆ ಈ ರೀತಿಯ ದೊಡ್ಡ ದಾಳಿಯನ್ನು ಉಕ್ರೇನ್‌ನಲ್ಲಿ ಸಂಭ್ರಮಿಸಲಾಗುತ್ತಿದೆ. ಇದು ರಷ್ಯಾಕ್ಕೆ ಮುಟ್ಟಿನೋಡಿಕೊಳ್ಳುವಂತಹ ಪೆಟ್ಟು ಎಂದು ಚರ್ಚೆಯಾಗುತ್ತಿದೆ.
ಉಕ್ರೇನ್
ನಡೆಸಿರುವ ಬಹುದೊಡ್ಡ ದಾಳಿಯನ್ನು ಆಪರೇಷನ್ ಸ್ಪೈಡರ್ ವೆಬ್ ಎಂದು ಕರೆಯಲಾಗುತ್ತಿದ್ದು ಜಗತ್ತಿನ ಸೇನಾನಾಯಕರ ಗಮನ ಸೆಳೆದಿದೆ.
ಉಕ್ರೇನ್ ಗಡಿಯಿಂದ ಬಹಳ ದೂರದಲ್ಲಿರುವ ಈ ವಾಯುನೆಲೆಗಳನ್ನು ಗುರಿಯಾಗಿಸಿ ನಡೆಸಿದ ಕಾರ್ಯಾಚರಣೆ ಯನ್ನು ಕಾರ್ಯಗತಗೊಳಿಸಲು ಒಂದರಿಂದ ಒಂದೂವರೆ ವರ್ಷದಿಂದ ಸಿದ್ಧತೆ ನಡೆದಿತ್ತು. ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೇ ಸ್ವತಃ ಈ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು ಎಂದು ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.
ಇನ್ನೊಂಡೆಡೆ
ಕೆರಳಿರುವ ರಷ್ಯಾ, ಉಕ್ರೇನ್ ಮೇಲೆ ಡ್ರೋನ್ ದಾಳಿಯನ್ನು ಮುಂದುವರೆಸಿದೆ. ಇತ್ತೀಚಿನ ಮಾಹಿತಿ ಪ್ರಕಾರ ರಷ್ಯಾ, ಉಕ್ರೇನ್‌ನ 150 ಡ್ರೋನ್‌ಗಳನ್ನು ಹೊಡೆದುರಳಿಸಿದೆ. ರಷ್ಯಾ ನಡೆಸಿದ ದಾಳಿಗೆ ಉಕ್ರೇನ್‌ನಲ್ಲಿ ಏಳು ಜನ ಭಾನುವಾರ ಮೃತಪಟ್ಟಿದ್ದಾರೆ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 