ರಾಷ್ಟ್ರೀಯ

ಸತಾರಾ–ಪುಣೆ ಹೆದ್ದಾರಿಯಲ್ಲಿ ಕಾರು ಪಲ್ಟಿ: ಇಬ್ಬರು ಸಾವು, ಮೂವರಿಗೆ ಗಾಯ

ಸತಾರಾ–ಪುಣೆ ಹೆದ್ದಾರಿಯಲ್ಲಿ ಕಾರು ಪಲ್ಟಿ: ಇಬ್ಬರು ಸಾವು, ಮೂವರಿಗೆ ಗಾಯ

ಕೊಲ್ಹಾಪುರ, ನ. 21  — ಸತಾರಾ–ಪುಣೆ ರಾಷ್ಟ್ರೀಯ ಹೆದ್ದಾರಿಯ ಸುರುರ್ ಬಳಿ ಶನಿವಾರ ಮಧ್ಯಾಹ್ನ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಮೃತರನ್ನು ಚಿಪ್ಳೂಣ್ ನಿವಾಸಿಗಳಾದ ವಿಜಯ್ ಧೋಂಡು ಪವಾರ್ (70) ಮತ್ತು ವೈಷ್ಣವಿ ವೈಭವ್ ಕದಂ (43) ಎಂದು ಗುರುತಿಸಲಾಗಿದೆ. ಇವರು ಇತರ ಮೂವರೊಂದಿಗೆ ಮುಂಬೈನಿಂದ ಚಿಪ್ಳೂಣ್‌ಗೆ ಕಾರಿನಲ್ಲಿ ತೆರಳುತ್ತಿದ್ದರು.

ಚಾಲಕ ತೂಕಡಿಸಿದ್ದರಿಂದ ಕಾರು ನಿಯಂತ್ರಣ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು ಮೂರು ಬಾರಿ ಪಲ್ಟಿಯಾಗಿ ನಿಂತಿದೆ.

ಗಾಯಗೊಂಡ ವೈಭವ್ ಕಾಮಬ್ ಕದಂ (45), ವೈಶಾಲಿ ವಿಜಯ್ ಪವಾರ್ (62) ಮತ್ತು ವೇದಾಂತ್ ವೈಭವ್ ಕದಂ (13) ಅವರನ್ನು ಚಿಕಿತ್ಸೆಗಾಗಿ ಸತಾರಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳೂ ಚಿಪ್ಳೂಣ್ ನಿವಾಸಿಗಳು.

ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸುದ್ದಿ ಓದಿ