ಬೈಲಹೊಂಗಲ

ಯುಗಾದಿ ಹಬ್ಬ: ಸಾವಯವ ಸಂತೆಗೆ ಪ್ರಭು ನೀಲಕಂಠಶ್ರೀ ಚಾಲನೆ

ಯುಗಾದಿ ಹಬ್ಬ: ಸಾವಯವ ಸಂತೆಗೆ ಪ್ರಭು ನೀಲಕಂಠಶ್ರೀ ಚಾಲನೆ

ಬೈಲಹೊಂಗಲ 10: ಆರೋಗ್ಯವೇ ಭಾಗ್ಯವಾಗಿದ್ದು ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಅದನ್ನು ಅರ್ಥ ಮಾಡಿಕೊಳ್ಳುವ ಮೂಲಕ ವೈದ್ಯರಿಂದ, ಆಸ್ಪತ್ರೆಗಳಿಂದ ದೂರವಿದ್ದು ಸಾವಯವ  ಆಹಾರ ಸೇವಿಸಿ ಆರೋಗ್ಯದಿಂದ ಇರಬೇಕು ಎಂದು ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು. 

ಅವರು ಪಟ್ಟಣದ ವಿದ್ಯಾನಗರದ ನವಗ್ರಹ ವಾಟಿಕ  ಉದ್ಯಾನವನದಲ್ಲಿ ನಡೆಯುತ್ತಿರುವ ಸಾವಯವ ಸಂತೆ 4 ವರ್ಷ ಪೂರೈಸಿದ್ದು,  ಯುಗಾದಿ ಹಬ್ಬವಾಗಿ  ಅಂಗವಾಗಿ 250 ನೇ ಸಾವಯವ ಸಂತೆಗೆ ಚಾಲನೆ ನೀಡಿ ಮಾತನಾಡಿದರು. 

ಸಾವಯವ ಸಂಘಟಕ ವಿಜಯ ಪತ್ತಾರ ಮಾತನಾಡಿ, ಶ್ರೀ ಸಿದ್ದೇಶ್ವರರ ಸ್ವಾಮೀಜಿಯವರ ಆಶೀರ್ವಾದ ಮತ್ತು ಕನೇರಿಮಠದ ಪೂಜ್ಯರ ಮಾರ್ಗ ದರ್ಶನದಲ್ಲಿ  ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ನೀಡಲೆಂದು ಪ್ರಾರಂಬಿಸಲಾದ ಸಾವಯವ ಸಂತೆಗೆ ಈಗ 4 ವರ್ಷಗಳನ್ನು ಪೂರೈಸಿದೆ. ಇದಕೆಲ್ಲ ಗ್ರಾಹಕರು ಹಾಗೂ ರೈತರ ಸಹಕಾರ ಬಹು ಮುಖ್ಯವಾಗಿದೆ ಎಂದರು. 

ವಿಶ್ವಹಿಂದೂ ಪರಿಷತ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಪುರಸಭೆ ಸದಸ್ಯೆ ವಾಣಿಶ್ರೀ ಪತ್ತಾರ, ಸಾವಯವ ರೈತರು ಹಾಗೂ ವಿದ್ಯಾನಗರ ನಿವಾಸಿಗಳು ಇದ್ದರು.  

ಸಂತೆಯಲ್ಲಿ  ಸಾವಯವ ಉತ್ಪನ್ನಗಳಾದ ಬೆಲ್ಲ ಕೋತಂಬ್ರಿ, ಬೆಂಡೆಕಾಯಿ, ಪಾಲಕ, ನುಗ್ಗೆ,  ಟೋಮೆಟೊ,  ಬೆಳ್ಳುಳ್ಳಿ, ಹಸಿಮೆಣಸಿನಕಾಯಿ,  ಪುಂಡಿ ಪಲ್ಯ,  ಹರವಿ ಪಲ್ಯ,  ಪೇರಲ ಹಣ್ಣು, ಜೇನು ತುಪ್ಪ, ದೇಸಿ ಆಕಳ ತುಪ್ಪ, ಅನೇಕ ಸಾವಯವ ವಸ್ತುಗಳು ಮಾರಾಟವಾದವು. 


ಸುದ್ದಿ ಓದಿ