ರಾಷ್ಟ್ರೀಯ

ಹತ್ರಾಸ್ ಅತ್ಯಾಚಾರದಂತಹ ಪ್ರಕರಣ ಸಹಿಸಲಸಾಧ್ಯ : ಉದ್ಧವ್ ಠಾಕ್ರೆ

ಹತ್ರಾಸ್ ಅತ್ಯಾಚಾರದಂತಹ ಪ್ರಕರಣ ಸಹಿಸಲಸಾಧ್ಯ : ಉದ್ಧವ್ ಠಾಕ್ರೆ

ಥಾಣೆ, ಅಕ್ಟೋಬರ್ 01: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ದೂಷಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಹತ್ರಾಸ್ ಅತ್ಯಾಚಾರದಂತಹ ಘಟನೆಗಳನ್ನು ತನ್ನ ರಾಜ್ಯದಲ್ಲಿ ಎಂದಿಗೂ ಸಹಿಸುವುದಿಲ್ಲ ಮತ್ತು ಮಹಿಳೆಯರ ಮೇಲಿನ ಅಪರಾಧಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸಲಾಗುವುದು ಎಂದು ಪ್ರತಿಪಾದಿಸಿದ್ದಾರೆ.

ಹೊಸದಾಗಿ ರೂಪುಗೊಂಡ ಮೀರಾ ಭಾಯಂದರ್ ವಸೈ ವಿರಾರ್ (ಎಂಬಿವಿವಿ) ಪೊಲೀಸ್ ಕಮಿಷನರೇಟ್ ಉದ್ಘಾಟನೆಯ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿಯವರ ಜೊತೆಗೆ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಗೃಹ ಸಚಿವ ಅನಿಲ್ ದೇಶ್ಮುಖ್ ಉಪಸ್ಥಿತರಿದ್ದರು.

ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ನಾಲ್ಕೂ ನಿಟ್ಟಿನಿಂದ ಖಂಡನೆ ವ್ಯಕ್ತವಾಗಿದೆ.   ಘಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶ ಮುಖ್ಯಮಂತ್ರಿಯವರಿಂದ ಮಾಹಿತಿ ಪಡೆದಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತ್ರಸ್ತೆಯ ಕುಟುಂಬದೊಂದಿಗೆ ಮಾತುಕತೆ ನಡೆಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಭರವಸೆ ನೀಡಿದ್ದಾರೆ.  ಹಾಗೂ ತನಿಖೆಗಾಗಿ 3 ಸದಸ್ಯರ ನಿಯೋಗ ಸ್ಥಾಪಿಸಿದ್ದಾರೆ.

ಸುದ್ದಿ ಓದಿ