ಯುಎಸ್ ಓಪನ್: ಸುಮೀತ್ ನಗಾಲ್ಗೆ ಮೊದಲ ಸುತ್ತಿನಲ್ಲಿ ರೋಜರ್ ಫೆಡರರ್ ವಿರುದ್ಧ ಕಠಿಣ ಸವಾಲು
ಚಂಡೀಗಢ, ಆ 24 ಗ್ರ್ಯಾನ್ ಸ್ಲ್ಯಾಮ್ಗೆ ಚೊಚ್ಚಲ ಪ್ರವೇಶ ಪಡೆದಿರುವ ಭಾರತದ ಉದಯೋನ್ಮುಖ ಟೆನಿಸ್ ಆಟಗಾರ ಸುಮೀತ್ ನಗಾಲ್ ಅವರು ಸೋಮವಾರದಿಂದ ಆರಂಭವಾಗುವ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಮೊದಲನೇ ಸುತ್ತಿನ ಪಂದ್ಯದಲ್ಲಿ ಕಠಿಣ ಸವಾಲು ಎದುರಿಸಲು ಸನ್ನದ್ಧರಾಗಿದ್ದಾರೆ. ಭಾರತದ ಸುಮೀತ್ ನಗಾಲ್ ಅವರು 20 ಬಾರಿ ಗ್ರ್ಯಾನ್ ಸ್ಲ್ಯಾಮ್ ಗೆದ್ದಿರುವ ಸ್ವಿಜರ್ಲೆಂಡ್ ಸ್ಟಾರ್ ಆಟಗಾರ ರೋಜರ್ ಫೆಡರರ್ ವಿರುದ್ಧ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಆರಂಭಿಕ ಸುತ್ತಿನಲ್ಲಿ ಕಠಿಣ ಸವಾಲು ಎದುರಿಸಲಿದ್ದಾರೆ. ಸಮೀತ್ ನಗಾಲ್ ಶುಕ್ರವಾರ ಯುಎಸ್ ಓಪನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬ್ರೆಜಿಲನ್ ಜೊವಾವೊ ಮೆನೆಜೆಸ್ ಅವರ ವಿರುದ್ಧ 5-7, 6-4, 6-3 ಅಂತರದಲ್ಲಿ ಗೆದ್ದು ಪ್ರಧಾನ ಸುತ್ತಿಗೆ ಪ್ರವೇಶವನ್ನು ಖಚಿತಪಡಿಸಿಕೊಂಡಿದ್ದರು. ಪ್ರಧಾನ ಸುತ್ತಿಗೆ ನೇರವಾಗಿ ಅರ್ಹತೆ ಪಡೆದಿರುವ ಭಾರತದ ಮತ್ತೊಬ್ಬ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರು ಮೊದಲ ಸುತ್ತಿನಲ್ಲೇ ಐದನೇ ಶ್ರೇಯಾಂಕದ ಡೆನಿಲ್ನ ಮೆಡ್ವೆಡೆವ್ ವಿರುದ್ಧ ಕಠಿಣ ಹೋರಾಟ ನಡೆಸಲು ಸಜ್ಜಾಗಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 