ರಾಷ್ಟ್ರೀಯ

ಜನವರಿ 2021ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ನಾಗರೀಕ ಸೇವೆಗಳ ಮುಖ್ಯ ಪರೀಕ್ಷೆ

ಜನವರಿ 2021ರಲ್ಲಿ    ಕೇಂದ್ರ  ಲೋಕಸೇವಾ ಆಯೋಗದ ನಾಗರೀಕ ಸೇವೆಗಳ ಮುಖ್ಯ ಪರೀಕ್ಷೆ

ನವದೆಹಲಿ, ನವೆಂಬರ್ 9:  ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ವೇಳಾ ಪಟ್ಟಿಯನ್ನು ಕೇಂದ್ರ  ಲೋಕ  ಸೇವಾ ಆಯೋಗ (ಯುಪಿಎಸ್‌ಸಿ) ಬಿಡುಗಡೆ ಮಾಡಿದೆ.  ಜನವರಿ 2021 ರಲ್ಲಿ   ಸಿವಿಲ್ ಮೇನ್ಸ್ ನಡೆಯಲಿದೆ ಎಂದು  ತಿಳಿಸಿದೆ.

ಜನವರಿ 8 ರಿಂದ ಜನವರಿ 17 ರವರೆಗೆ ಪರೀಕ್ಷೆಗಳು ನಡೆಯಲಿವೆ.   ಐದು ದಿನಗಳಲ್ಲಿ  ಪ್ರಬಂಧ  ಪರೀಕ್ಷೆ ಇರುವ ದಿನ ಹೊರತು ಪಡಿಸಿ  ಉಳಿದ  ದಿನ ಎರಡು ಅವಧಿಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿ  ವೀಕ್ಷಿಸಲು     ಅಧಿಕೃತ ವೆಬ್‌ಸೈಟ್ upc.gov.in ಗೆ ಭೇಟಿ ನೀಡುವಂತೆ ಯು ಪಿ ಎಸ್‌ ಸಿ ಸೂಚಿಸಿದೆ.

ಅಕ್ಟೋಬರ್ 4 ರಂದು ನಡೆದ  ಪೂರ್ವ ಭಾವಿ ಪರೀಕ್ಷೆಯ ಸಾಧನೆಯ  ಆಧಾರದ ಮೇಲೆ ಒಟ್ಟು 10,564 ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗಳಿಗೆ ಆಯ್ಕೆ ಮಾಡಲಾಗಿದೆ. ಅಹಮದಾಬಾದ್, ಐಜ್ವಾಲ್,  ಪ್ರಯಾಗ ರಾಜ್ (ಅಲಹಾಬಾದ್), ಬೆಂಗಳೂರು, ಭೋಪಾಲ್, ಚಂಡೀಗಢ, ಚೆನ್ನೈ, ಕಟಕ್, ಡೆಹ್ರಾಡೂನ್, ದೆಹಲಿ, ದೀಸ್ಪುರ್ (ಗುವಾಹಟಿ), ಹೈದರಾಬಾದ್, ಜೈಪುರ, ಜಮ್ಮು, ಕೋಲ್ಕತಾ, ಲಕ್ನೋ, ರಾಯಪುರ, ರಾಂಚಿ,  ಷಿಲ್ಲಾಂಗ್, ಶಿಮ್ಲಾ,  ತಿರುವನಂತಪುರ  ವಿಜಯವಾಡದಲ್ಲಿ    ಮುಖ್ಯ  ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.    ಮುಖ್ಯ ಪರೀಕ್ಷೆಗೆ  ಹಾಜರಾಗಲು   ಅರ್ಹತೆ ಹೊಂದಿರುವ  ಅಭ್ಯರ್ಥಿಗಳು ನವೆಂಬರ್ 11 ರಂದು ಅಥವಾ  ಅದಕ್ಕೂ ಮೊದಲು ವಿವರವಾದ ಅರ್ಜಿ  ನಮೂನೆ  (ಡಿಎಎಫ್) ಭರ್ತಿ ಮಾಡಿ ಸಲ್ಲಿಸಬೇಕು. 

ಸುದ್ದಿ ಓದಿ