ಯುಪಿ ವಿಧಾನಸಭಾ ಉಪ ಚುನಾವಣೆ: ಇಂದೇ 88 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ತೀರ್ಮಾನ
ಲಕ್ನೋ,
ನವೆಂಬರ್ 3: ಉತ್ತರ ಪ್ರದೇಶದ 7 ವಿಧಾನಸಭಾ
ಸ್ಥಾನಗಳಿಗೆ ಮತದಾನ ಮಂಗಳವಾರ ಬಿಗಿ ಭದ್ರತೆಯ ನಡುವೆ
ಆರಂಭವಾಗಿದ್ದು, 9 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 88 ರಾಜಕೀಯ ನಾಯಕರ ಹಣೆ ಬರಹ, ರಾಜಕೀಯ ಭವಿಷ್ಯ ಇಂದೇ ತೀರ್ಮಾನವಾಗಲಿದೆ.
ಎಲ್ಲಾ ಮತಗಟ್ಟೆಗಳಳಿಗೆ ರಾಜ್ಯ ಪೊಲೀಸ್ ಹಾಗೂ ಕೇಂದ್ರ ಪಡೆ ಸಿಬಬ್ಬಂದಿ ನಿಯೋಜನೆ ಮಾಡಲಾಗಿದೆ. ಚುನಾವಣೆ ನಡೆಯಲಿರುವ ಕ್ಷೇತ್ರಗಳೆಂದರೆ ನೌಗನ್ ಸದಾತ್, ಡಿಯೋರಿಯಾ, ಬುಲಂದ್‌ಶಹರ್, ತುಂಡ್ಲಾ, ಬಂಗರ್ಮೌ, ಮಲ್ಹಾನಿ ಮತ್ತು ಘಟಂಪೂರ್.13.5 ಲಕ್ಷ ಪುರುಷರು, 11.30 ಲಕ್ಷ ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 24.34 ಲಕ್ಷ ಮತದಾರರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ.ಈ 7 ಕ್ಷೇತ್ರಗಳಲ್ಲಿ 9 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 88 ಅಭ್ಯರ್ಥಿಗಳು ಹಣೆ ಬರಹ ಇಂದೇ ತೀರ್ಮಾನವಾಗಲಿದೆ.
ಬುಲಂದ್‌ಶಹರ್ ಸ್ಥಾನದಲ್ಲಿ ಅತಿ ಹೆಚ್ಚು 18 ಅಭ್ಯರ್ಥಿಗಳಿದ್ದರೆ, ಘಟಂಪೂರ್ (ಮೀಸಲು) ಅತಿ ಕಡಿಮೆ 6 ಅಭ್ಯರ್ಥಿಗಳಿದ್ದಾರೆ. ಈ ಉಪಚುನಾವಣೆಗಳ ಮತಗಳ ಎಣಿಕೆ ಇದೇ 10 ರಂದು ನಡೆಯಲಿದೆ.
ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಮತ್ತು ಎಸ್‌ಪಿ ನಡುವೆ ನೇರ ಸ್ಪರ್ಧೆ ಇದ್ದರೂ ಕೆಲವು ಕಡೆ ಕಡೆ ರೆ ಬಿಎಸ್‌ಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ 2022 ರಲ್ಲಿ ನಡೆಯಲಿದ್ದು ಈ ಚುನಾವಣೆ ಫಲಿತಾಂಶಗಳು ಜನರ ಮನಸ್ಸಿನ ಭಾವನೆ, ಗಾಳಿಯ ದಿಕ್ಕು ಯಾವ ಕಡೆ ಹೋಗುತ್ತಿದೆ ಎಂಬುದರ ಸಂಕೇತವಾಗಿದೆ .