ರಾಷ್ಟ್ರೀಯ

ನಾಳೆ ಕೇಂದ್ರ ಸಂಪುಟ ಸಭೆ

ನಾಳೆ  ಕೇಂದ್ರ  ಸಂಪುಟ   ಸಭೆ

ನವದೆಹಲಿ, ಅ 20:ನಾಳೆ ಕೇಂದ್ರ ಸಂಪುಟ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಹಲವು ಅಂಶಗಳ ಬಗ್ಗೆ ಚರ್ಚೆ ನಡೆಯುವ  ನಿರೀಕ್ಷೆಯಿದೆ.  ರಕ್ಷಣಾ ಸಚಿವ  ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್  ಸೇರಿದಂತೆ   ಹಲವು  ಸಚಿವರು  ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ  ಸಂಪುಟ ಸಭೆಯಲ್ಲಿ ಪ್ರಮುಖವಾಗಿ ದೇಶದಲ್ಲಿನ ಕೊರೊನಾ ಪರಿಸ್ಥಿತಿ, ಕೊರೊನಾ ಕಾರಣದಿಂದ  ದೇಶದ ಪ್ರಸಕ್ತ ಆರ್ಥಿಕ ಪರಿಸ್ಥಿತಿ, ದೇಶದ ಭದ್ರತೆ, ಚೈನಾ ಗಡಿಯಲ್ಲಿ  ಸೇನಾ  ಸನ್ನದ್ದತೆ ಮತ್ತಿತರ ಅಂಶಗಳ ಬಗ್ಗೆ  ಚರ್ಚಿಸುವ  ಸಾಧ್ಯತೆಯಿದೆ.


ಸುದ್ದಿ ಓದಿ