ಕಾಗವಾಡ

ಕಾಗವಾಡದಲ್ಲಿ ಎರಡು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕಾಗವಾಡದಲ್ಲಿ ಎರಡು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಲೋಕದರ್ಶನ ವರದಿ 

ಕಾಗವಾಡ  11: ಗ್ರಾಮೀಣ ಭಾಗದ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಉತ್ತಮ ತೋಟದ ರಸ್ತೆಗಳ ಅವಶ್ಯಕತೆ ಇದ್ದು, ಶಾಸಕ ರಾಜು ಕಾಗೆ ರೈತರ ಬೇಡಿಕೆಗೆ ಸ್ಪಂದಿಸಿ, ಪಟ್ಟಣದ ತೋಟದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ರಸ್ತೆ ಅಭಿವೃದ್ಧಿ ಪಡಿಸುತ್ತಿರುವದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಮುಖಂಡ ರಮೇಶ ಚೌಗಲಾ ಹೇಳಿದರು. 

ಅವರು ಬುಧವಾರ ದಿ. 10 ರಂದು ಪಟ್ಟಣದಲ್ಲಿ ಶಾಸಕರ ಅನುದಾನದಲ್ಲಿ ಪಂಚಾಯತ ರಾಜ್ ಇಲಾಖೆಯಿಂದ ಮಂಜೂರಾದ 20 ಲಕ್ಷ ವೆಚ್ಚದ ಕಾಗವಾಡ-ಇಂಗಳಿ ರಸ್ತೆ ಹಾಗೂ 30 ಲಕ್ಷ ವೆಚ್ಚದ ಕಾಗವಾಡದಿಂದ ಮಗದುಮ್ಮಕೊಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ಶಾಸಕರು ಪಟ್ಟಣಕ್ಕೆ ಅತೀ ಹೆಚ್ಚಿನ ಅನುದಾನ ನೀಡಿದ್ದಾರೆ. ಅಧಿಕಾರಿಗಳು, ಗುತ್ತಿಗೆದಾರರು ಸಮಯದಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ, ಜನರಿಗೆ ಅನಕೂಲ ಮಾಡಿಕೊಡಬೇಕು ಎಂದು ಹೇಳಿದರು. 

ಈ ವೇಳೆ ಗುತ್ತಿಗೆದಾರ ಸುನೀಲ ಅವಟಿ, ಇಂಜಿನಿಯರ್ ಮಡಿವಾಳಪ್ಪ ಪಾಟೀಲ, ಮುಖಂಡರಾದ ಚಿದಾನಂದ ಅವಟಿ, ಪೋಪಟ ಪಾಟೀಲ, ಪ್ರಭಾಕರ ಕೋರೆ, ರೇವಣ್ಣ ಕೋಳೆಕರ, ಸಿದ್ದು ವಡೆಯರ, ಉಮರ್ ಪಾರೂಕ್, ಗಣೇಶ ಕೋಳೆಕರ, ಮಹಾದೇವ ಕೋಳೆಕರ, ಸುರೇಶ ಜಗನಾಡೆ, ಸುರೇಶ ಕೋಳೆಕರ, ಅನೀಲ ಪವಾರ, ಬಾಳು ಕೋಳೆಕರ, ಅರುಣ ಕರವ, ಅಭಿ ಪವಾರ, ಪ್ರಕಾಶ ಚೌಗಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ