ಚಿಕ್ಕೋಡಿ

ಅಂಜುಮನ್‌-ಏ-ಇಸ್ಲಾಂ ಕಮೀಟಿ ಎರಡು ಅಂಬ್ಯೂಲನ್ಸ್‌ ಲೋಕಾರ್ಪಣೆ

ಅಂಜುಮನ್‌-ಏ-ಇಸ್ಲಾಂ ಕಮೀಟಿ ಎರಡು ಅಂಬ್ಯೂಲನ್ಸ್‌ ಲೋಕಾರ್ಪಣೆ
ಚಿಕ್ಕೋಡಿ: ಕೊರೊನಾ ಸೋಂಕಿತರ ಅನುಕಲಕ್ಕಾಗಿ ಅಂಜುಮನ್‌-ಏ-ಇಸ್ಲಾಂ ಕಮೀಟಿ ಎರಡು ಅಂಬ್ಯೂಲನ್ಸ್‌ ಲೋಕಾರೆ​‍್ಣಗೊಳಿಸಿದರು.

ಚಿಕ್ಕೋಡಿ 02: ಕೊರೊನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕಿತರ ಅನುಕೂಲಕ್ಕಾಗಿ ಚಿಕ್ಕೋಡಿ ನಗರದ ಅಂಜುಮನ್‌-ಏ-ಇಸ್ಲಾಂ ಕಮೀಟಿ ಎರಡು  ಅಂಬ್ಯುಲೇನ್ಸ ಸೇವೆಗೆ  ಲೋಕಾರ್ಪಣೆಗೊಳಿಸಿದರು. 

ಚಿಕ್ಕೋಡಿ ನಗರದ ಅಂಜುಮನ್ ಇಸ್ಲಾಂ ಕಮಿಟಿ ಆವರಣದಲ್ಲಿ ಈ ಅಂಬ್ಯುಲನ್ಸ್‌ಗೆ  ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ ಕೊಣ್ಣೂರೆ ಚಾಲನೆ ನೀಡಿದರು. ನಂತರ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಮಹಮ್ಮದ್ ಈಸಾ ನಾಯಿಕವಾಡಿ ಮಾತನಾಡಿ, ಮಾನವೀಯತೆ ದೃಷ್ಟಿಕೋನದಿಂದ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಸಹಕಾರವನ್ನು ಮಾಡುವ ಉದ್ದೇಶದಿಂದ ನಮ್ಮ ಅಂಜುಮನ್ ಇಸ್ಲಾಂ ಕಮಿಟಿಯು ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಧ್ಯ ಕೊರೊನಾದ ಪರಿಸ್ಥಿತಿಯಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯಿಂದ ಅಂಬುಲೆನ್ಸ ಸೇವೆಯನ್ನು ಪ್ರಾರಂಭಿಸಿದ್ದೇವೆ ಎಂದರು. 

 ಈ ಅಂಬುಲೆನ್ಸಗಳು ಕೊರೊನಾ ಸೋಂಕಿತರಿಗೆ ಹಾಗೂ ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಗಳ ಶವಸಂಸ್ಕಾರ ಮಾಡುವುಕ್ಕೆ ಅನುಕೂಲವಾಗುತ್ತದೆ. ಅದೇ ರೀತಿ ಕೊರೊನಾ ರೋಗಿಗಳಿಗೆ ಉಚಿತವಾಗಿ ಆಕ್ಷಿಜನ ಪೂರೈಸುವುದು, ಅದಲ್ಲದೇ ಜಾತ್ಯಾತೀತವಾಗಿ ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಗಳ ಶವಸಂಸ್ಕಾರ ಮಾಡಲಾಗುತ್ತಿದೆ ಎಂದರು. 

ಮೌಲಾನಾ ತಲಹಾ ಮಾತನಾಡಿ ದೇಶದಲ್ಲಿ ಕೊರೊನಾದಿಂದ ಅತ್ಯಂತ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾದಿಂದ ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ಯಾರು ಕೂಡಾ ಮುಂದೆ ಬರುತ್ತಿಲ್ಲ.ಇಂತಹ ಪರಿಸ್ಥಿತಿಯಲ್ಲಿ ಚಿಕ್ಕೋಡಿಯ ಅಂಜುಮನ್ ಇಸ್ಲಾಂ ಕಮೀಟಿ ಯು ಕೊರೊನಾ ರೋಗಿಗಳ ಅನುಕೂಲಕ್ಕಾಗಿ ಸೇವೆ ಆರಂಭಿಸಿದ್ದು ಶ್ಲಾಘನೀಯ ಎಂದರು. 

ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಗುಲಾಬ ಹುಸೇನ್ ಬಾಗವಾನ, ಇರ್ಫಾನ ಬೇಪಾರಿ, ಮೌಲಾನಾ ಮುದ್ದುಸಾರ, ರಿಯಾಜ್ ಟಂಕಸಾಳೆ, ಮತಿನ ಮುಜಾವಾರ, ಮಜಿದ ಬೆಪಾರಿ, ಶಬ್ಬಿರ ಗೌಂಡಿ, ಅಖಿಲ್ ಮುಲ್ಲಾ,ಸಮೀರ ನಾಯಿಕವಾಡಿ, ಬಾಬಾಸಾಬ ಸದಲಗೆ, ಅಬ್ದುಲ್ ತಾಂಬಟ, ಬಬಲು ಸದಲಗೆ, ಯಾಕೂಬ ತಾಂಬಟ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ