ರಾಣೆಬೆನ್ನೂರ

ಕುಮಾರಪಟ್ಟಣಂ ಪುಣ್ಯ ಕೋಟಿ ಮಠ ತುಂಗಾ ತೀರದಲ್ಲಿ ತುಂಗಾರತಿ, ಧರ್ಮ ಜಾಗೃತಿ ಸಮಾರಂಭ

ಕುಮಾರಪಟ್ಟಣಂ ಪುಣ್ಯ ಕೋಟಿ ಮಠ  ತುಂಗಾ ತೀರದಲ್ಲಿ ತುಂಗಾರತಿ, ಧರ್ಮ ಜಾಗೃತಿ ಸಮಾರಂಭ


ಲೋಕದರ್ಶನ ವರದಿ 

ರಾಣಿಬೆನ್ನೂರು 05: ತಾಲೂಕಿನ ಅವಿಮುಕ್ತ ತಪೋಕ್ಷೇತ್ರ ಕುಮಾರಪಟ್ಟಣಂ ಪುಣ್ಯಕೋಟಿ ಮಠದಲ್ಲಿ ಏ.7 ಮತ್ತು 8 ರಂದು 2 ದಿವಸಗಳ ಕಾಲ 3ನೇ ವರ್ಷದ ತುಂಗಾರತಿ ಧಾರ್ಮಿಕ ಜಾಗೃತಿ ಕಾರ್ಯಕ್ರಮವು ನಡೆಯಲಿದೆ ಎಂದು ಶ್ರೀಮಠದ ಬಾಲಯೋಗಿ ಜಗದೀಶ್ವರ ಮಹಾಸ್ವಾಮಿಗಳು ಹೇಳಿದರು.  

    ಅವರು ಮಂಗಳವಾರ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ, ಶ್ರೀಗಳು ಉತ್ತರ ಭಾರತದ ಗಂಗಾ ನದಿ ತೀರದಲ್ಲಿ ಗಂಗಾರತಿ ನಡೆದರೆ ದಕ್ಷಿಣ ಭಾರತದ ಪುಣ್ಯಕೋಟಿ ಮಠದ ತಟದಡಿಯಲ್ಲಿ ಸಾಗಿ ಹೋಗಿರುವ ತುಂಗಭದ್ರ ನದಿ ತೀರದಲ್ಲಿ ತುಂಗಾರತಿ ನಡೆಯುತ್ತಿದೆ. ಮೂರನೇ ವರ್ಷದ ಈ ಕಾರ್ಯಕ್ರಮವು ಬಾಳೇಹೊನ್ನೂರಿನ 1008 ಜಗದ್ಗುರು ಡಾಽಽ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯರರ ದಿವ್ಯ ನೇತೃತ್ವದಲ್ಲಿ ಆಯೋಜನೆಗೊಂಡಿದೆ ಎಂದರು. 

   ಹರಿಹರ ನಗರದ ಶೀ ಹರಿಹರೇಶ್ವರ ದೇವಸ್ಥಾನದಿಂದ ಭಗವತ್ಪಾದಂಗಳವರ ಸಾರೋಟೋತ್ಸವದ ಮೆರವಣಿಗೆಯು ಹೊರಟು ನಂತರ ತುಂಗಾರತಿ ಭವ್ಯ ವೇದಿಕೆಗೆ ಬಂದು ತಲುಪುವುದು. 8 ರಂದು ಶುಕ್ರವಾರ ಸಂಜೆ 4 ಗಂಟೆಗೆ ತುಂಗಾರತಿ ನಿಮಿತ್ತ ಧಾರ್ಮಿಕ ಸಮಾರಂಭ ಜರುಗುವುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ವಿಶ್ವಮಾತಾ ಪುಣ್ಯಕೋಟಿ ಪ್ರಶಸ್ತಿ ಪ್ರಧಾನ ಜರುಗಲಿದೆ. ಶಾಸಕ ಅರುಣಕುಮಾರ ಪೂಜಾರ ಅವರು ಭವ್ಯ ಸಮಾರಂಭದ ಅಧ್ಯಕ್ಷತೆ ವಹಿಸುವರು. ಶ್ರೀ ಜಗದೀಶ್ವರ ಅಪ್ಪಾಜಿ ಅವರ ಸತ್ಯ ಸಂಕಲ್ಪದಂತೆ ಈ ಕಾರ್ಯಕ್ರಮವು ನಡೆಯಲಿದೆ ಎಂದರು.  

   ಪ್ರವಾಸೋಧ್ಯಮ ಸಚಿವ ಆನಂದ ಸಿಂಗ್ ಅವರು ಪುಣ್ಯಕೋಟಿ ಕ್ಯಾಲೆಂಡರ್ ಬಿಡುಗಡೆಗೊಳಿಸುವರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತುಂಗಾರತಿ ಉದ್ಘಾಟಿಸುವರು.   ಡಾಽಽ ಶಾಂತ ವೀರ ಮಹಾಸ್ವಾಮಿಗಳು, ಡಾಽಽ ಜಯಸಿದ್ದೇಶ್ವರ ಶಿವಾಚಾರ್ಯರರು ಸೇರಿದಂತೆ ನಾಡಿನ ಅನೇಕ ಶಿವಾಚಾರ್ಯರರು ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸುವರು, ಮುಕ್ತಿ ಮಂದಿರದ ವಿಮಲ ರೇಣುಕಾ ವೀರಮುಕ್ತಿಮುನಿ ಶಿವಾಚಾರ್ಯರರು ಉಪದೇಶಾಮೃತ ನೀಡುವರು. ಅಕ್ಕಿಆಲೂರು ಚಂದ್ರಶೇಖರ ಶಿವಾಚಾರ್ಯರರು ಸ್ವಾಗತಿಸುವರು. ಮಣಕವಾಡ ಮಂದಿರ ಮಠದ ಅಭಿನವ ಮೃತ್ಯುಂಜಯ ಸ್ವಾಮಿಗಳು ಪ್ರಾಸ್ತಾವಿಕ ನುಡಿಯಾಡುವರು. ನಾಡಿನ ಅನೇಕ ಗಣ್ಯ ಮಾನ್ಯರು, ರಾಜಕೀಯ ನಾಯಕರು ಸೇರಿದಂತೆ ಮತ್ತಿತರ ಗಣ್ಯರ ಅಭಿನಂದನಾ ಸನ್ಮಾನ ಪ್ರಶಸ್ತಿ ಪ್ರಧಾನ ನಡೆಯಲಿದೆ. ಭಕ್ತಾಧಿಗಳು ಎಂದಿನಂತೆ ಭಾಗವಹಿಸಿ ಧಾರ್ಮಿಕ ಜಾಗೃತಿ ಕಾರ್ಯಕ್ರಮವು ಯಶಸ್ವಿಗೊಳಿಸುವಂತೆ ಜಗದೀಶ್ವರ ಮಹಾಸ್ವಾಮಿಗಳವರು ಮಾಧ್ಯಮಕ್ಕೆ ತಿಳಿಸಿದರು. 


ಸುದ್ದಿ ಓದಿ