ಬೈಲಹೊಂಗಲ

ಕ್ಷಯರೋಗ ಪರೀಕ್ಷೆ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ: ಸಿದ್ದನ್ನವರ

ಕ್ಷಯರೋಗ ಪರೀಕ್ಷೆ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ: ಸಿದ್ದನ್ನವರ
ಪಟ್ಟಣದ ತಾಪಂ.ಸಭಾಭವನದಲ್ಲಿ ರಾಷ್ಟ್ರೀಯ ಕ್ಷಯರೋಗ ದಿನಾಚಾರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವೈದ್ಯರುಗಳನ್ಮ್ನ

ಬೈಲಹೊಂಗಲ27: ಕ್ಷಯರೋಗದ ಪರೀಕ್ಷೆ ಚಿಕಿತ್ಸೆ ಮತ್ತು ಚಿಕಿತ್ಸೆಯು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿದ್ದು, ಕ್ಷಯರೋಗಿಗಳಿಗೆ ಪ್ರೋತ್ಸಾಹ ಧನದ ಉಪಯೋಗವಿದ್ದು ರೋಗಿಗಳು ಇದರ ಲಾಭ ಪಡೆದು ಆರೋಗ್ಯವಂತರಾಗಬೇಕೆಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ ತಿಳಿಸಿದರು.

ಪಟ್ಟಣದ ತಾಪಂ. ಸಭಾಭವನದಲ್ಲಿ ರಾಷ್ಟ್ರೀಯ ಕ್ಷಯರೋಗ ದಿನಾಚಾರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಷಯರೋಗ ಪತ್ತೆ ಹಚ್ಚುವಲ್ಲಿ ಖಾಸಗಿ ವೈದ್ಯರ ಪಾತ್ರ ಹಿರಿದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿದ ಖಾಸಗಿ ವೈದ್ಯರುಗಳಾದ ಡಾ. ಮಹಾಂತೇಶ ಗದಗ, ಡಾ. ರವೀಂದ್ರಕುಮಾರ ಜಕನೂರ, ಡಾ. ಸುಭಾಷ ನೇಗಿನಹಾಳ, ಆರೋಗ್ಯ ಸಂಸ್ಥೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಸಿದ ಡಾ, ಮಹೇಶ್ವರಿ ವ್ಹಿ.ಕೆ,  ನಾಗರಾಜ ರಾಜನಾಳ,  ವiಹಾಂತೇಶ್ವರಿ  ಯಾದವಾಡ, ಸೋಮಶೇಖರ ಕಂಬಾರ,  ಚನ್ನಮ್ಮಾ ಚಚಡಿ,  ಶಾಂತವ್ವಾ ಮಲ್ಲಾಪ್ರರ ಅವರನ್ನು ಸನ್ಮಾನಿಸಲಾಯಿತು. 

ಕ್ಷಯರೋಗ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಅರುಣಕುಮಾರ ದೇಸಾಯಿ, ಮೈಲಾರಿಗೌಡ ಖಾನಗೌಡ್ರ, ಎಸ್. ಎಸ್ ಮುತ್ನಾಳ  ಇದ್ದರು.  ಡಿ.ಎಸ್ ಝೆಂಡೇಕರ ನಿರೂಪಿಸಿದರು.  ವ್ಹಿ.ಜಿ ಪಾಟೀಲ ವಂದಿಸಿದರು.  

ಸುದ್ದಿ ಓದಿ