ರಾಣೆಬೆನ್ನೂರಲ್ಲಿ ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ
ಕ್ಷಯ ರೋಗ ಕುರಿತು ಮೂಢನಂಬಿಕೆ ಸಲ್ಲದು - ಜಗದೀಶ್ವರ ಶ್ರೀಗಳು
ರಾಣೆಬೆನ್ನೂರು ನ 6 ಎಲ್ಲ ಭಾಗ್ಯಗಳಿಗಿಂತಲೂ ಆರೋಗ್ಯ ಭಾಗ್ಯ ಬಹು ದೊಡ್ಡದು, ಹಣ ಗಳಿಸಬಹುದು ಆದರೆ ಆರೋಗ್ಯಗಳಿಸುವುದು ಬಹಳ ಕಷ್ಟಕರ ಸಂಗತಿ.ಆರೋಗ್ಯಯುತ ಜೀವನ ಬದುಕಿಗೆ ಪ್ರತಿಯೊಬ್ಬರು ಮುಂಜಾಗ್ರತ ಕ್ರಮವಹಿಸಿ ನಿರೋಗಿಗಳಾಗಬೇಕು ಎಂದು ಕುಮಾರ ಪಟ್ಟಣಂ ಪುಣ್ಯಕೋಟಿ ಮಠದ ಬಾಲ ಯೋಗಿ ಶ್ರೀ ಜಗದೀಶ್ವರ ಮಹಾಸ್ವಾಮಿಗಳು ನುಡಿದರು.
ಅವರು ಇಲ್ಲಿನ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ, ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ನಿಮಿತ್ತ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಮತ್ತು ತಾಲೂಕ ಕೇಂದ್ರ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದೆ, ಪ್ರಧಾನ ಮಂತ್ರಿಗಳ ಕ್ಷಯ ಮುಕ್ತ ಭಾರತ ಜಾಗೃತಿ ಅಭಿಯಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಕ್ಷಯ ರೋಗ ವಾಸಿಯಾಗದ ಕಾಯಿಲೆ ಏನಲ್ಲ, ಇತರೆ ಕಾಯಿಲೆಗಳಂತೆ ಅದು ಸಹ ಒಂದು. ಯಾವುದು ಮೂಢನಂಬಿಕೆ ಅಲ್ಲ ಆ ರೀತಿ ವಿಚಾರ ಮಾಡುವುದು ಸರಿಯಲ್ಲ ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಎಲ್ಲ ರೋಗಗಳಿಗೂ ಔಷಧಿ ಇದೆ. ನಿಗದಿತ ಅವಧಿಯಲ್ಲಿ ಔಷಧಿಗಳನ್ನು ಸೇವಿಸಿ ಆರೋಗ್ಯವಂತರಾಗಲು ಮುಂದಾಗಬೇಕು ಎಂದರು. ಕ್ಯಾಂಡಲ್ ವಾಕ್ ಚಾಲನೆ ನೀಡಿದ ವಿಧಾನಪರಿಷತ್ ಸದಸ್ಯ ಆರ್. ಶಂಕರ್ ಅವರು,ಕ್ಷಯ ಮುಕ್ತ ಭಾರತ ಮಾಡಲು, ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಲಿದೆ, ಕಾಯಲೇ ಉಲ್ಬಣವಾಗದಂತೆ ಅದರ ಶಮನಕ್ಕಾಗಿ, ಮೇಲಿಂದ ಮೇಲೆ ತಪಾಸಣೆಗೂಳಪಟ್ಟು, ರೋಗದಿಂದ ಮುಕ್ತಿ ಹೊಂದುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಗದೀಶ್ ಪಾಟೀಲ್ ಅವರು, ಕಾಯಿಲೆ ಬರುವುದು ಆಕಸ್ಮಿಕ. ಕಾಯಿಲೆ ಹರಡುವ ಮುನ್ನ ಕೆಲವು ಲಕ್ಷಣಗಳು ಕಂಡುಬರುತ್ತವೆ. ಇಂದಿನ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ ಎಲ್ಲಾ ಕಾಯಿಲೆ ಗಳನ್ನು ಗುಣಪಡಿಸಬಹುದು. ಕೇಂದ್ರ ಸರ್ಕಾರ ಇದರ ನಿವಾರಣೆಗಾಗಿ ಸಾಕಷ್ಟು ಕ್ರಿಯಾ ಯೋಜನೆಗಳನ್ನು ರೂಪಿಸಿದೆ. ಎಂದು ವಿವರಿಸಿದ ಪಾಟೀಲ್ ಅವರು, ರೋಗಿಯನ್ನು ಹೊಡೆದೋಡಿಸುವುದಲ್ಲ,. ರೋಗ ವನ್ನು ಮಾತ್ರ ಹೊಡೆದೋಡಿಸಬೇಕು.
ರೋಗಿಯೊಂದಿಗೆ ಅತ್ಯಂತ ಪ್ರೀತಿ ವಿಶ್ವಾಸ ಮತ್ತು ಸೌಜನ್ಯಯುವಾಗಿ ನಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ತಮ್ಮ ಇಲಾಖೆ ಕ್ಯಾಂಡಲ್ ವಾಕ್ ಮತ್ತು ರಂಗೋಲಿಯಲ್ಲಿ ಕ್ಷಯರೋಗ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಕರ್ನಾಟಕ. ರಾ. ಅ. ಕೈ ನಿಗಮದ ನಿರ್ದೇಶಕಿ ಭಾರತಿ ಕುಮಾರ ಜಂಬಿಗಿ. ಜಿಲ್ಲಾ ಪಂ. ಮಾಜಿ ಸದಸ್ಯ ಮಂಗಳಗೌರಿ ಪೂಜಾರ್, ಯುವ ನಾಯಕ ಮಂಜುನಾಥ್ ಗೌಡ ಶಿವಣ್ಣನವರ್, ಮತ್ತಿತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರಾದ, ಶಸಿರೇಖಾ ತಾನೇದ, ಮಮತಾ ಕೆ. ಬಿ. ಪಿ.ನದಾಫ್, ರೇಖಾ ಬೇಲೂರು, ಪ್ರಾಚಾರ್ಯರಾದ, ಅಬ್ದುಲ್, ಚಂದ್ರಶೇಖರ ಸೊರಟೂರ್, ಕುಮಾರ್ ಜೋಗಾರ್, ನಾಗರಾಜ ತಾವಡೇ, ಸಿದ್ದಪ್ಪ ಗುಡೇಣ್ಣನವರ ಎಂ.ಎಸ್.ಶಿಗ್ಗಾವ್, ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಅಧಿಕಾರಿಗಳು ಶಿಕ್ಷಕರು ಸಾರ್ವಜನಿಕರು ಪಾಲ್ಗೊಂಡಿದ್ದರು.