ಸತ್ಯಕ್ಕೆ ಸದಾ ಜಯವಿದೆ : ಸತೀಶ್ ಚಂದ್ರ ಪ್ರಧಾನ್
ಥಾಣೆ, ಸೆಪ್ಟೆಂಬರ್ 30: ಬಾಬರಿ ಮಸೀದಿ ಪ್ರಕರಣದ ತೀರ್ಪನ್ನು ಮೇಯರ್ ಹಾಗೂ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಸತೀಶ್ ಚಂದ್ರ ಪ್ರಧಾನ್ ಸ್ವಾಗತಿಸಿದ್ದಾರೆ.
ವಿಶೇಷ ಸಿಬಿಐ ನ್ಯಾಯಾಲಯವು 28 ವರ್ಷಗಳಷ್ಟು ಹಳೆಯದಾದ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ ಈ ಕುರಿತು ಪ್ರತಿಕ್ರಿಯಿಸೊರುವ ಬಿಜೆಪಿಯ ಹಿರಿಯ ನಾಯಕ ಸತೀಶ್ ಚಂದ್ರ ಪ್ರಧಾನ್, "ಸತ್ಯ ಯಾವಾಗಲೂ ಮೇಲುಗೈ ಸಾಧಿಸುತ್ತದೆ" ಎಂದು ಹೇಳಿದ್ದಾರೆ.
ಯುಎನ್ಐ ಜೊತೆ ಮಾತನಾಡಿದ ಅವರು, "ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ" ಎಂದು ಪ್ರತಿಪಾದಿಸಿದರು.
ಮಾಜಿ ಸಂಸದರೂ ಆಗಿರುವ ಪ್ರಧಾನ್, ಶಿವಸೇನೆ ಮುಖ್ಯಸ್ಥ ಬಾಲ್ ಠಾಕ್ರೆ ಅವರ ಆಪ್ತರಾಗಿದ್ದರು ಮತ್ತು ಮಹಾರಾಷ್ಟ್ರದಾದ್ಯಂತ ಪಕ್ಷವು ಬೆಳೆಯಲು ಶ್ರಮಿಸಿದ್ದಾರೆ.
ರಾಮಜನ್ಮಭೂಮಿ ಚಳವಳಿಯ ಸಂದರ್ಭದಲ್ಲಿ ಕರಸೇವಕರನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಓಂ ಪ್ರಕಾಶ್ ಶರ್ಮಾ ಸಹ ತೀರ್ಪಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.