ರಾಷ್ಟ್ರೀಯ

ಡೊನಾಲ್ಡ್ ಟ್ರಂಪ್ ಮತ್ತೊಬ್ಬಮಗನಿಗೂ ಅಮರಿಕೊಂಡ ಕೊರೋನ ಸೋಂಕು

ಡೊನಾಲ್ಡ್ ಟ್ರಂಪ್ ಮತ್ತೊಬ್ಬಮಗನಿಗೂ ಅಮರಿಕೊಂಡ ಕೊರೋನ ಸೋಂಕು

ವಾಷಿಂಗ್ಟನ್, ನವೆಂಬರ್ 21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಗೆ ಕೋವಿಡ್  ಸೋಂಕು ದೃಢಪಟ್ಟಿದೆ  ಯಾವುದೇ ರೋಗ ಲಕ್ಷಣ ಇಲ್ಲದ ಕಾರಣ ಅವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

 

ಈ ವಾರದ ಆರಂಭದಲ್ಲೇ ಅವರಿಗೆ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಅಂದಿನಿಂದ ಅವರು ತಮ್ಮ ಕ್ಯಾಬಿನ್ ನಲ್ಲೇ ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎಂದು ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ರ ವಕ್ತಾರ ಹೇಳಿಕೆ ನೀಡಿದ್ದಾರೆ 

 

ಡೊನಾಲ್ಡ್ ಟ್ರಂಪ್ ಜೂನಿಯರ್ ಈ ವಾರದ ಆರಂಭದಲ್ಲಿ ಕೊರೋನಾ ಸೋಂಕಿನ ಬಗ್ಗೆ ತಿಳಿದುಕೊಂಡು ನಂತರ  ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗಿದ್ದಾರೆ. ಅವರು ಇಲ್ಲಿಯವರೆಗೆ ಸಂಪೂರ್ಣವಾಗಿ ಲಕ್ಷಣರಹಿತರಾಗಿದ್ದಾರೆ ಮತ್ತು ವೈದ್ಯಕೀಯವಾಗಿ ಶಿಫಾರಸು ಮಾಡಿದ ಎಲ್ಲಾ ಆರೋಗ್ಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆ.

 

' ಡೊನಾಲ್ಡ್ ಟ್ರಂಪ್ ಜೂನಿಯರ್ ವೈರಸ್ ಸೋಂಕಿಗೆ ಒಳಗಾದ ಅಮೆರಿಕ ಅಧ್ಯಕ್ಷರ ಕುಟುಂಬದ ಇತ್ತೀಚಿನ ಹೊಸ ಸದಸ್ಯ. ಟ್ರಂಪ್ ಹಾಗೂ ಅವರ ಪತ್ನಿ  ಪ್ರಥಮ ಮಹಿಳೆ ಮತ್ತು ಅವರ ಮತ್ತೊಬ್ಬ ಮಗ ಈಗಾಗಲೇ ಸೋಂಕಿ ನಿಂದ  ಚೇತರಿಸಿಕೊಂಡಿದ್ದಾರೆ.

ಸುದ್ದಿ ಓದಿ