ರಾಷ್ಟ್ರೀಯ

ವಾಲ್ಟರ್ ರೀಡ್ ಸೇನಾ ಆಸ್ಪತ್ರೆಯಿಂದ ಕಾರ್ಯ ನಿರ್ವಹಿಸಲಿರುವ ಡೊನಾಲ್ಡ್ ಟ್ರಂಪ್

ವಾಲ್ಟರ್  ರೀಡ್  ಸೇನಾ ಆಸ್ಪತ್ರೆಯಿಂದ  ಕಾರ್ಯ ನಿರ್ವಹಿಸಲಿರುವ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಅಕ್ಟೋಬರ್ 3:  ಕೋವಿಡ್  -19  ಸೋಂಕಿಗೆ  ಒಳಗಾಗಿರುವ  ಅಮೆರಿಕಾ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಲ್ಟರ್ ರೀಡ್ ಮಿಲಿಟರಿ ಮೆಡಿಕಲ್ ಸೆಂಟರ್ ಗೆ  ದಾಖಲಾಗಿದ್ದು,  ಅಲ್ಲಿ ಅವರು ಮುಂದಿನ ಹಲವು ದಿನಗಳ ಕಾಲ  ವೈದ್ಯಕೀಯ  ಚಿಕಿತ್ಸೆಯ  ಜೊತೆಗೆ  ಆಸ್ಪತ್ರೆಯಿಂದಲೇ  ಅಧ್ಯಕ್ಷೀಯ  ಕಾರ್ಯ ಕಲಾಪಗಳನ್ನು  ನಡೆಸಲಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಅಧ್ಯಕ್ಷ  ಡೊನಾಲ್ಡ್ ಟ್ರಂಪ್  ಅವರು   ಮರೈನ್  ಒನ್  ಹೆಲಿಕಾಪ್ಟರ್   ಹತ್ತುವ ಮೊದಲು  ನಡೆದುಕೊಂಡು  ಪತ್ರಕರ್ತರತ್ತ ಕೈ  ಬೀಸುತ್ತಿರುವ   ದೃಶ್ಯಗಳನ್ನು  ಸುದ್ದಿ ವಾಹಿನಿಗಳು  ಶುಕ್ರವಾರ  ಬಿತ್ತರಿಸಿವೆ.

ಅಮೆರಿಕಾ ಅಧ್ಯಕ್ಷರಿಗೆ   ಕೋವಿಡ್ -19  ಸೋಂಕಿನ  ಲಘು ಲಕ್ಷಣಗಳು ಕಾಣಿಸಿಕೊಂಡಿದ್ದು,  ಆರೋಗ್ಯ ,ಉತ್ಸಾಹದಿಂದಿದ್ದಾರೆ. ನವಂಬರ್ ನಲ್ಲಿ ನಡೆಯಲಿರುವ  ಅಧ್ಯಕ್ಷೀಯ ಚುನಾವಣೆ ಹಾಗೂ  ಉಳಿದ ಅವಧಿಯ ಅಧ್ಯಕ್ಷೀಯ ಅವಧಿಗೆ ಮುಂದುವರಿಯಲಿದ್ದಾರೆ  ಎಂದು ಶ್ವೇತ ಭವನ  ಇದಕ್ಕೂ ಮುನ್ನ ಶುಕ್ರವಾರ   ಹೇಳಿತ್ತು.

ಸುದ್ದಿ ಓದಿ