ಕುಷ್ಟಗಿ

ಲಾರಿ ಮತ್ತು ನೀರಿನ ಟ್ಯಾಂಕರ್ ಡಿಕ್ಕಿ: ಲಾರಿ ಚಾಲಕ ಸಾವು

ಲಾರಿ ಮತ್ತು ನೀರಿನ ಟ್ಯಾಂಕರ್ ಡಿಕ್ಕಿ: ಲಾರಿ ಚಾಲಕ ಸಾವು

ಕುಷ್ಟಗಿ 06: ತಮಿಳುನಾಡು ಮೂಲದ ಲಾರಿಯೊಂದು ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 50ರ ಬಳಿಯ ಅಮರಗುಂಡಪ್ಪ ಪೆಟ್ರೋಲ್ ಬಂಕ್ ಹತ್ತಿರ ಜರುಗಿದೆ. ಮೃತಪಟ್ಟ ಲಾರಿ ಚಾಲಕನನ್ನು ತಮಿಳುನಾಡ ರಾಜ್ಯದ ತಿರುಚನಾಪಳ್ಳಿ ಜಿಲ್ಲೆಯ ಪುಷ್ಪನಾಥನ್ ತಂದೆ ರಂಗಸ್ವಾಮಿ (41) ಎಂದು ಗುರುತಿಸಲಾಗಿದೆ.  

ಇನ್ನೊಬ್ಬ ಲಾರಿ ಚಾಲಕ ಸೆಲ್ವರಾಜ್ ತಂದೆ ಮುತ್ತುಸ್ವಾಮಿಗೆ ಹಾಗೂ ನೀರಿನ ಟ್ಯಾಂಕರ್ ಚಲಾಯಿಸುತ್ತಿದ್ದ ಕಂದಕೂರ ಗ್ರಾಮದ ಚಾಲಕ ಮುರ್ತಜಾ ಸಾಬ್ ತಂದೆ ಯಮನೂರು ಸಾಬ್ ಮೇಗಳಮನಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ.  

ಘಟನೆ ವಿವರ: ತಮಿಳುನಾಡು ರಾಜ್ಯದ ತಿರುಚನಾಪಳ್ಳಿ ಜಿಲ್ಲೆಯಿಂದ ಟೆಂಗಿನಕಾಯಿಯನ್ನು ಲಾರಿಯಲ್ಲಿ ತುಂಬಿಕೊಂಡು ಕುಷ್ಟಗಿ ಮಾರ್ಗವಾಗಿ ಮಹಾರಾಷ್ಟ್ರ ರಾಜ್ಯದ ಇಂದೂರಿಗೆ ತೆರಳುವಾಗ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 50ರ ಬಳಿಯ ಅಮರಗುಂಡಪ್ಪ ಮೇಟಿ ಅವರ ಪೆಟ್ರೋಲ್ ಬಂಕ್  ಹತ್ತಿರ ರಾಷ್ಟ್ರೀಯ ಹೆದ್ದಾರಿಗೆ ಸೇರಿದ ನೀರಿನ ಟ್ಯಾಂಕರ್ ಒಂದು ರಸ್ತೆಬದಿಯ ಗಿಡಗಳಿಗೆ ನೀರು ಹಾಕುತ್ತಿರುವ ವೇಳೆ ಲಾರಿ ರಭಸವಾಗಿ ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ಕಂದಕಕ್ಕೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಿಪಿಐ ನಿಂಗಪ್ಪ ರುದ್ರ​‍್ಪಗೋಳ, ಪಿಎಸ್‌ಐ ತಿಮ್ಮಣ್ಣ ನಾಯಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು. ಈ ಘಟನೆ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ