ನೈಜೀರಿಯಾದಲ್ಲಿ ಮಾರುಕಟ್ಟೆಗೆ ನುಗ್ಗಿದ ಟ್ರಕ್ : 16 ಮಂದಿ ಸಾವು
ಲಾಗೋಸ್,
ನವೆಂಬರ್ 2: ನೈರುತ್ಯ ನೈಜೀರಿಯಾದಲ್ಲಿ ಶನಿವಾರ ಟ್ರಕ್ವೊಂದು ಜನನಿಬಿಡ ಮಾರುಕಟ್ಟೆಗೆ ನುಗ್ಗಿದ್ದರಿಂದ
ಕನಿಷ್ಠ 16 ಜನರು ಸಾವನ್ನಪ್ಪಿದ್ದು, ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಒಂಡೋ ರಾಜ್ಯದ ಅಕುಂಗ್ಬಾ ಅಕೊಕೊದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ರಾಜ್ಯದ ಫೆಡರಲ್ ರಸ್ತೆ ಸುರಕ್ಷತಾ ಕೋರ್ (ಎಫ್‌ಆರ್‌ಎಸ್‌ಸಿ) ಮುಖ್ಯಸ್ಥ ಬೊಬೊಯ್ ಒಯೆಮಿ ಭಾನುವಾರ ತಡರಾತ್ರಿ ಕ್ಸಿನುವಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಗಾಯಗೊಂಡ ಮೂವರು ಪುರುಷರು,, ಮೂವರು ಸ್ತ್ರೀಯರು ಮತ್ತು ಒಂದು ಗಂಡು ಮಗು ಸೇರಿದಂತೆ ಒಟ್ಟು ಏಳು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಒಯೆಮಿ ಹೇಳಿದ್ದಾರೆ.
ಮಾರುಕಟ್ಟೆಗೆ ಟ್ರಕ್ ನುಗ್ಗಲು ಕಾರಣವೇನೆಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ನೈಜೀರಿಯಾದಲ್ಲಿ ರಸ್ತೆ ಅಪಘಾತಗಳಿಗೆ ಅಜಾಗರೂಕತೆಯ ಚಾಲನೆ ಮತ್ತು ಕಳಪೆ ರಸ್ತೆಗಳು ಪ್ರಮುಖ ಕಾರಣಗಳಾಗಿವೆ.