ಮನರಂಜನೆ

ಮಗಳ ನಡಿಗೆ ಬಗ್ಗೆ ಟ್ರೋಲ್.. ಖಡಕ್‌ ವಾರ್ನಿಂಗ್‌ ನೀಡಿದ ಅಭಿಷೇಕ್‌ ಬಚ್ಚನ್‌

ಮಗಳ    ನಡಿಗೆ  ಬಗ್ಗೆ ಟ್ರೋಲ್..     ಖಡಕ್‌  ವಾರ್ನಿಂಗ್‌    ನೀಡಿದ   ಅಭಿಷೇಕ್‌ ಬಚ್ಚನ್‌

ಮುಂಬೈ, ಡಿ 3:  ಸಾಮಾನ್ಯವಾಗಿ   ಸೆಲೆಬ್ರಿಟಿಗಳಿಗೆ  ಸಂಬಂಧಿಸಿದ  ಯಾವುದೇ  ಸುದ್ದಿ ಕ್ಷಣಾರ್ಧದಲ್ಲಿ      ವೈರಲ್  ಆಗುತ್ತದೆ.       ಅವರ  ಕುಟುಂಬದವರ ಮೇಲೂ    ಜನ ಸಾಮನ್ಯರ     ಕಣ್ಣು    ಹೆಚ್ಚು ಕೇಂದ್ರೀಕರಿಸಿರುತ್ತದೆ.   ಇದು   ಕೆಲವೊಮ್ಮೆ   ಮುಜುಗರಕ್ಕೂ  ಕಾರಣವಾಗುತ್ತದೆ.  ತಾವು  ನಿರೀಕ್ಷಿಸದ    ಯಾವುದೇ ಬದಲಾವಣೆಗಳು  ಕಂಡಕೂಡಲೇ     ಜನರು     ಟ್ರೋಲ್ ಮಾಡುತ್ತಾರೆ.   ಬಾಲಿವುಡ್ ತಾರಾ ಜೋಡಿ  ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್   ಇತ್ತೀಚೆಗೆ  ಇಂತಹದ್ದೇ ಪರಿಸ್ಥಿತಿ ಎದುರಾಗಿದೆ.

ಇತ್ತೀಚೆಗಷ್ಟೇ    ಮಗಳು  ಆರಾಧ್ಯಳೊಂದಿಗೆ   ಮಾಲ್ಡೀವ್ಸ್‌ಗೆ ತೆರಳಿದ್ದ   ಬಚ್ಚನ್,  ಫ್ಯಾಮಿಲಿ  ಏರ್‌ಪೋರ್ಟ್‌ನಲ್ಲಿ ಮಾಧ್ಯಮದವರ  ಕಣ್ಣಿಗೆ ಬಿದ್ದಿದೆ.   ವಿಶೇಷವಾಗಿ ಆರಾಧ್ಯ ನಡಿಗೆಯ  ಮೇಲೆ   ಎಲ್ಲರ   ಗಮನ  ಕೇಂದ್ರೀಕರಿಸುವಂತೆ  ಮಾಡಿದೆ.      ಐಶ್ವರ್ಯ ರೈ  ಸದಾ   ಮಗಳನ್ನು  ಕೈ ಹಿಡಿದುಕೊಂಡು  ನಡೆಸುವುದು,   ಆರಾಧ್ಯಳ  ನಡಿಗೆ   ಶೈಲಿ  ಬಗ್ಗೆ  ಸೋಷಿಯಲ್ ಮೀಡಿಯಾದಲ್ಲಿ  ಕೆಟ್ಟದಾಗಿ  ಟ್ರೋಲ್ ಮಾಡಿದ್ದಾರೆ.   ಇತ್ತೀಚೆಗಷ್ಟೇ   ಸಿನಿಮಾ  ಪ್ರಚಾರವೊಂದರಲ್ಲಿ   ಪಾಲ್ಗೊಂಡಿದ್ದ  ಅಭಿಷೇಕ್ ಬಚ್ಚನ್ ತಮ್ಮ ಮಗಳ  ನಡಿಗೆಯನ್ನು     ಟ್ರೋಲ್   ಮಾಡುತ್ತಿರುವ  ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಾನು  ಸಾರ್ವಜನಿಕ   ವ್ಯಕ್ತಿ.  ನನ್ನನ್ನು ಎಷ್ಟಾದರೂ   ಟ್ರೋಲ್ ಮಾಡಿ  ಸಹಿಸಿಕೊಳ್ಳುತ್ತೇನೆ.   ಆದರೆ   ನನ್ನ ಮಗಳ  ಬಗ್ಗೆ   ಮಾತನಾಡುವ   ಹಕ್ಕು  ನಿಮಗೆ  ಇಲ್ಲ. ಧೈರ್ಯವಿದ್ದರೆ  ಆ  ಮಾತುಗಳನ್ನು  ನನ್ನ ಮುಂದೆ ಬಂದು ಹೇಳಲಿ ಎಂದು   ಟ್ರೋಲಿಗರಿಗೆ    ಖಾರವಾಗಿ ಎಚ್ಚರಿಕೆ ನೀಡಿದ್ದಾರೆ. ಅಭಿಷೇಕ್   ಅವರ ಈ ಕಾಮೆಂಟ್ ಈಗ ವೈರಲ್ ಆಗಿದೆ. 

ಸುದ್ದಿ ಓದಿ