ಡಿ.ಬಿ.ಮಲ್ಲೂರ ಫೌಂಡೇಶನ್ನಿಂದ ತ್ರಿವರ್ಣ ಧ್ವಜ ವಿತರಣೆ
ಲೋಕದರ್ಶನ ವರದಿ
ಬೈಲಹೊಂಗಲ 12: ಇಂದಿನ ಪ್ರಸಕ್ತ ದಿನಮಾನದಲ್ಲಿ ಭಾವನೆಗಳನ್ನು ಅರಿತು ಜೀವನ ಸಾಗಿಸಿದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವೆಂದು ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಮಲ್ಲೂರ ಹೇಳಿದರು.
ಅವರು ಗುರುವಾರ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಬೈಲಹೊಂಗಲ, ಡಿ.ಬಿ.ಮಲ್ಲೂರ ಫೌಂಡೆಶನ್ ಇಂಚಲ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಬೆಳವಡಿ, ಬೈಲಹೊಂಗಲ ಆಶ್ರಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಭಾರತ ದೇಶ ಹಬ್ಬಗಳ ತವರೂರಾಗಿದ್ದು, ಒಂದಿಲ್ಲೊಂದು ಹಬ್ಬ ಆಚರಣೆ ನಮ್ಮ ಪೂರ್ವಜರ ಕಾಲದಿಂದಲೂ ಆಚರಣೆ ಮಾಡುತ್ತಾ ಬಂದಿದ್ದು ಜಗತ್ತಿನಲ್ಲಿ ಯಾವುದೇ ಒಂದು ಕಾರ್ಯ ನಡೆಯಬೇಕಾದರೆ ಬಲವಾದ ಕಾರಣವಿರುತ್ತದೆ ಎಂದರು.
ಇಂದು ಮನುಷ್ಯ ಸಂಸಾರದ ಜಂಜಾಟದಲ್ಲಿ ತನ್ನ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದು ಪರಿವಾರದ ಬಾಂಧವ್ಯವನ್ನು ಕಳೆದುಕೊಂಡಿದ್ದೇವೆ. ಇದನ್ನು ತಡೆಗಟ್ಟಲು ಪೂರ್ವಜರು ಅನೇಕ ಹಬ್ಬ ಹರಿದಿನಗಳನ್ನು ಆಚರಣೆ ಮಾಡುತ್ತಾ ಭಾತೃತ್ವಭಾವನೆಯನ್ನು ಮೈಗೂಡಿಸಿಕೊಳ್ಳಬೇಕೆಂದರು.
ಎಲ್ಲ ನಿದರ್ೇಶಕರ ಸಹಕಾರದಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಶ್ರೀಕ್ಷೇತ್ರ ಸೊಗಲದಲ್ಲಿ ಕಾರ್ಖಾನೆ ಪ್ರಗತಿ, ರೈತರ, ಕಾಮರ್ಿಕ, ಸಿಬ್ಬಂದಿ ಏಳ್ಗೆಗಾಗಿ ವಿಶೇಷ ಪೂಜಾ ಅಭಿಷೇಕ ಮಾಡಿ ಕಾಖರ್ಾನೆಗೆ ಯಾವುದೇ ಅಡಚಣಿ ಬರದಂತೆ ನೋಡಿಕೊಳ್ಳಲಾಗುತ್ತಿದೆ.
ಸುಕ್ಷೇತ್ರ ಇಂಚಲದ ಡಿ.ಬಿ.ಮಲ್ಲೂರ ಫೌಂಡೇಶನ ಮೂಲಕ ಹಲವಾರು ಸಾಮಾಜಿಕ ಕಾರ್ಯ ಮಾಡುತ್ತಾ ವಿಶೇಷವಾಗಿ ರೈತರಿಗೆ ತರಬೇತಿ ಆಯೋಜನೆ ಮಾಡುತ್ತಾ ಒಳ್ಳೆಯ ಕಾರ್ಯವನ್ನು ಮಾಡುತ್ತಿದೆ. ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಮಾಡುವದನ್ನು ಗುರುತಿಸಿ ಅವರಿಗೆ ಸತ್ಕಾರ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಅನನ್ಯವಾಗಿದೆ ಎಂದರು.
ಬೆಳವಡಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಪಾರ್ವತಿ ಅಕ್ಕನವರು ಮಾತನಾಡಿ, ಪ್ರತಿಯೊಬ್ಬ ಮಾನವ ಜೀವನದಲ್ಲಿ ನಿತ್ಯ ಹೋರಾಟ ಮಾಡಿದಾಗ ಮಾತ್ರ ಆತ್ಮ ವಿಶ್ವಾಸ ರೂಡಿಸಿಕೊಳ್ಳಲು ಸಾದ್ಯ. ಪರಿಸ್ಥಿತಿ ಅರಿತು ತಗ್ಗಿ ಬಗ್ಗಿ ನಡೆಯಬೇಕೆಂದರು. ಪ್ರತಿಯೊಬ್ಬ ನಾರಿ ಸಹೋದರರಿಗೆ ರಾಕಿ ಕಟ್ಟಿ ಕಷ್ಟ ಕಾಲದಲ್ಲಿ ನನ್ನನ್ನು ರಕ್ಷಿಸಬೇಕೆಂಬ ಮಹದಾಸೆ ಇರುತ್ತದೆ. ಮನುಷ್ಯ ಸದ್ಭಾವನಾ ಭಾವ ಹೊಂದಬೇಕು. ಪ್ರತಿ ಕ್ಷಣ ನಮ್ಮನ್ನುಭಯ ಕಾಡುತ್ತಿದೆ. ಒತ್ತಡ ಜೀವನದ ಸಮಸ್ಯೆಗೆ ಕಾರಣವಾಗಿದೆ. ನಮ್ಮ ವಿಚಾರಧಾರೆಗಳು ಒಳ್ಳೆಯ ಸಕಾರಾತ್ಮಕವಾಗಿ ಬೆಳೆಸಿಕೊಳ್ಳಬೇಕು. ಸಹೋದರ ಯಾವುದೇ ಕಾಣಿಕೆ ಕೊಡಬಾರದು. ನಿಮ್ಮಲ್ಲಿರುವ ದುಶ್ಚಟಗಳನ್ನು ಭಗವಂತನಿಗೆ ಸಮಪರ್ಿಸಿ ಸುಂದರವಾದ ಜೀವನ ರೂಪಿಸಿಕೊಳ್ಳಬೇಕು. ನಾವೆಲ್ಲ ಭೂಮಿಯ ಮೇಲೆ ಭಗವಂತನ ಕೈಗೊಂಬೆಯಾಗಿದ್ದೇವೆ. ಸಹೋದರಿಯ ರಕ್ಷಣೆಗಾಗಿ ರಕ್ಷಾ ಬಂಧನ ಹಬ್ಬವಾಗಿದೆ ಎಂದರು.
ಡಿ.ಬಿ.ಮಲ್ಲೂರ ಫೌಂಡೇಶನ ವತಿಯಿಂದ 75ನೇ ಆಜಾದಿಕಾ ಅಮೃತ ಮಹೋತ್ಸವದ ನಿಮಿತ್ಯ ತ್ರಿವರ್ಣ ಧ್ವಜವನ್ನು ವಿತರಿಸಲಾಯಿತು. ಪ್ರಜಾಪಿತ ಬ್ರಹ್ಮಕುಮಾರಿ ಸಹೋದರಿಯರು ಎಲ್ಲರಿಗೂ ರಕ್ಷಾ ಬಂಧನ ಕಟ್ಟಿ ಸಹೋದರತ್ವ ಭಾವನೆ ಮೆರೆದರು.
ಸುಕ್ಷೇತ್ರ ಇಂಚಲದ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆ ಚೇರಮನ್ ಡಿ.ಬಿ. ಮಲ್ಲೂರ ಅವರ ಶಿಕ್ಷಣ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಶ್ರೇಷ್ಠ ವಿಜಯರತ್ನ 2022 ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಅವರನ್ನುಕಾರ್ಖಾನೆ ಆಡಳಿತ ಮಂಡಳಿಯಿಂದ ಸತ್ಕರಿಸಲಾಯಿತು.
ಕಾಖರ್ಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಗೂಳಪ್ಪನವರ, ಉಪಾಧ್ಯಕ್ಷ ರಾಜು ಕುಡಸೋಮಣ್ಣವರ,ನಿರ್ದೇಶಕ ಪಾರೀಶ ಬಾಂವಿ, ಅಶೋಕ ಬಾಳೇಕುಂದರಗಿ, ಪ್ರದೀಪ ವನ್ನೂರ, ಮಲ್ಲಯ್ಯ ರುದ್ರಾಪೂರ, ಗಂಗಪ್ಪ ಭರಮಣ್ಣವರ, ಬಸವರಾಜ ಇಂಗಳಗಿ, ಮಡಿವಾಳಪ್ಪ ಅಂಗಡಿ, ಪಾರ್ವತಿ ಸೋಮನಟ್ಟಿ, ಕಮಲವ್ವ ಅವ್ವಕನವರ, ಅದೃಶಪ್ಪ ಕೊಟಬಾಗಿ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ನಿಂಗಪ್ಪ ಚೌಡನ್ನವರ ಹಾಗೂ ಮಲ್ಲಪ್ಪ ಯರಿಕಿತ್ತೂರ, ಶಿವಪುತ್ರಪ್ಪ ಅವ್ವಕನವರ, ಕಸ್ತೂರಿ ಅಕ್ಕನವರು, ಪ್ರಕಾಶ ಪಾಟೀಲ, ಬಾಳಪ್ಪ ಶೀಲವಂತರ, ಉಪಸ್ಥಿತರಿದ್ದರು.
ಜನರಲ್ ಮ್ಯಾನೇಜರ್ ಸಿ.ಬಿ. ಪಾಟೀಲ ನಿರೂಪಿಸಿದರು. ಕಾರ್ಯದರ್ಶಿ ಅಶೋಕ ಭೂಮನ್ನವರ ವಂದಿಸಿದರು