ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಮಹೇಶಗೆ ಸನ್ಮಾನ
ಶಿಗ್ಗಾವಿ ಃ ಹಾವೇರಿ ಜಿಲ್ಲೆಯ ಕಾರ್ಮಿಕ ಇಲಾಖೆಯ ನೂತನ ಜಿಲ್ಲಾ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮಹೇಶ ಲಕ್ಷಣ ಕುಳಲಿ ಅವರನ್ನು ಕರುನಾಡು ಕಟ್ಟಡ ನಿರ್ಮಾಣ ಕಾರ್ಮಿಕರ ಜಾಗೃತಿ ಹಾಗೂ ಅಭಿವೃದ್ಧಿ ವೇದಿಕೆ ಶಿಗ್ಗಾವಿ ಇವರ ವತಿಯಿಂದ ಸ್ವಾಗತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕರುನಾಡು ಕಟ್ಟಡ ನಿರ್ಮಾಣ ಕಾರ್ಮಿಕರ ಜಾಗೃತಿ ಹಾಗೂ ಅಭಿವೃದ್ದಿ ವೇದಿಕೆ ಜಿಲ್ಲಾಧ್ಯಕ್ಷ ಹನಮಂತಪ್ಪ ವಡ್ಡರ ಊರ್ಫ ಬಾರಂಗಿ, ಮಲ್ಲಿಕಾರ್ಜುನಸ್ವಾಮಿ ಕಾಳೆ, ಮಣಿಕಂಠ ವಡ್ಡರ, ನಾಗಪ್ಪ ವಡ್ಡರ, ವೆಂಕಟೇಶ ವಡ್ಡರ ಸೇರಿದಂತೆ ಇತರರು ಉಪಸ್ಥಿತರಿದ್ದರು.