ಚಿಕ್ಕೋಡಿ

ಮಾಜಿ ಸೈನಿಕರ ಸನ್ಮಾನ : ಸುಪ್ರಭಾತ ವ್ಹಾಲಿಬಾಲ್ ಕ್ಲಬ್‌ದಿಂದ ಸಾಮಾಜಿಕ ಸೇವೆ

ಮಾಜಿ ಸೈನಿಕರ ಸನ್ಮಾನ : ಸುಪ್ರಭಾತ ವ್ಹಾಲಿಬಾಲ್ ಕ್ಲಬ್‌ದಿಂದ ಸಾಮಾಜಿಕ ಸೇವೆ

ಲೋಕದರ್ಶನ ವರದಿ 

ಚಿಕ್ಕೋಡಿ 17: ದೇಶ ಸೇವೆಯಲ್ಲಿ ಸೈನಿಕರ ಪಾತ್ರ ದೊಡ್ಡದಿದೆ. ಸೈನಿಕರಿಗೆ ಗೌರವ ಕೊಡುವುದು ನಮ್ಮೇಲ್ಲರ ಕರ್ತವ್ಯದ ಜೊತೆಗೆ ಮಾಜಿ ಸೈನಿಕರನ್ನು ಗೌರವಿಸುವ ಮೂಲಕ ಸೈನ್ಯಕ್ಕೆ ಸೇರುವ ಯುವಕರಿಗೆ ಪ್ರೋತ್ಸಾಹ ಕೊಡುವುದು ಅತಿ ಅಮೂಲ್ಯವಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ ಹೇಳಿದರು. 

ಇಲ್ಲಿನ ಸುಪ್ರಭಾತ ವ್ಹಾಲಿಬಾಲ್ ಪ್ರೇಂಡ್ಸ್‌ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಮಾಜಿ ಸೈನಿಕರಾದ ದಯಾನಂದ ಕಡಪಟ್ಟಿ, ರಾಜು ಬಸನ್ನವರ, ಅಶೋಕ ಕೋರೆ ಅವರ ಸನ್ಮಾನ ಸಮಾರಂಭದಲ್ಲಿ  ಮಾತನಾಡಿದರು. ಕಳೆದ 11 ವರ್ಷಗಳಿಂದ ಸುಪ್ರಭಾತ ವ್ಹಾಲಿಬಾಲ್ ಪ್ರೇಂಡ್ಸ್‌ ಕ್ಲಬ್ ಸದಾ ಸಾಮಾಜಿಕ ಸೇವೆ ಮಾಡುತ್ತಾ ಬಂದಿದೆ. ಈ ದಿಸೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ ನಿಮಿತ್ಯ ನಮ್ಮ ಕ್ಲಬ್‌ದಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿರುವ ಮಾಜಿ ಸೈನಿಕರಾದ ದಯಾನಂದ ಕಡಪಟ್ಟಿ, ರಾಜು ಬಸನ್ನವರ, ಅಶೋಕ ಕೋರೆ ಅವರನ್ನು ಸನ್ಮಾನಿಸಿರುವುದು ನಮಗೆ ಸಂತೋಷವಾಗಿದೆ ಎಂದರು. 

ಮಾಜಿ ಸೈನಿಕರು ಮತ್ತು ಪಿಡಿಒ ದಯಾನಂದ ಕಡಪಟ್ಟಿ ಮಾತನಾಡಿ ಮಾಜಿ ಸೈನಿಕರನ್ನು ವರ್ಷಕ್ಕೆ ಒಂದೇ ದಿನ ನೆನಪು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಸುಪ್ರಭಾತ ವ್ಹಾಲಿಬಾಲ್ ಪ್ರೆಂಡ್ಸ್‌ ಕ್ಲಬ್ ಪ್ರತಿ ನಿತ್ಯ ಮಾಜಿ ಸೈನಿಕರಿಗೆ ಗೌರವ ಕೊಡುವುದು ಖುಷಿ ತರಿಸಿದೆ ಎಂದರು. 

ರಾಜು ಸಂಕೇಶ್ವರಿ, ಸಂಜು ಹುಲ್ಲೋಳ್ಳಿ, ಕೃಷ್ಣಾ ಭೋಸಲೆ, ಸುರೇಶ ಭೋಸಲೆ, ಮಹಾದೇವ ಪೂಜೇರಿ, ಅಶೋಕ ಹರಗಾಪೂರೆ, ಸತೀಶ ನೂಲಿ, ಪ್ರಭು ಡಬ್ಬನ್ನವರ, ವಿನೋಧ ಪಾಟೀಲ, ಸಂಜು ಡಬ್ಬನ್ನವರ, ರಣಜೀತ ಶಿಂಧೆ, ಬಸವರಾಜ ಮುಗನ್ನವರ, ಮಂಜುನಾಥ ಕರನಿಂಗ,  ಸಂತೋಷ ಕಟ್ಟಿಮನಿ, ಉಮೇಶ ಶೆಡಜಿ ಮುಂತಾದವರು ಇದ್ದರು. 


ಸುದ್ದಿ ಓದಿ