ರಾಷ್ಟ್ರೀಯ

ಮಹಾರಾಷ್ಟ್ರಕ್ಕೆ ಸಾರಿಗೆ ಸಂಚಾರ ಪುನಾರಂಭ

ಮಹಾರಾಷ್ಟ್ರಕ್ಕೆ ಸಾರಿಗೆ ಸಂಚಾರ ಪುನಾರಂಭ

ಕಲಬುರಗಿ, ಸೆಪ್ಟೆಂಬರ್ 19: ಕೋವಿಡ್-19 ಲಾಕ್ಡೌರನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂತಾರಾಜ್ಯ ಸಾರಿಗೆ ಸಂಚಾರವನ್ನು ಇದೀಗ ಲಾಕ್ಡೌಳನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಗನುಗುಣವಾಗಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ವಿವಿಧ ಸ್ಥಳಗಳಿಗೆ ಸಾರಿಗೆ ಸಂಚಾರವನ್ನು ಪುನರಾರಂಭಿಸಲಾಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ. 

ಬಸ್ಸಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರಥಮ ಹಂತದಲ್ಲಿ ಸೋಲಾಪೂರ, ಉಮರ್ಗಾ, ಉದಗೀರ್, ದೇಗಲೂರು, ನಾಂದೇಡ ಹಾಗೂ ಔರಂಗಬಾದ ಮಾರ್ಗಗಳಲ್ಲಿ ಈಗಾಗಲೇ ಸೆ. 16 ರಿಂದ ಸಾರಿಗೆ ಬಸ್ಸುಗಳ ಕಾರ್ಯಾಚರಣೆ ಮಾಡಲಾಗಿದೆ. ಸಾಂಗ್ಲಿ ಹಾಗೂ ಕೋಲ್ಲಾಪೂರ ವಲಯಗಳಲ್ಲಿ ಸೆ. 21 ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮಹಾರಾಷ್ಟ್ರ ರಾಜ್ಯದ ಎಲ್ಲಾ ಸಾರಿಗೆ ಸಂಚಾರವನ್ನು ಸೆ.22 ರಿಂದ ರಿಂದ ಪೂರ್ಣ ಆಸನಗಳೊಂದಿಗೆ ಪ್ರಯಾಣಿಸಲು ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕ ಪ್ರಯಾಣಿಕರು ಮುಂಗಡ ಆಸನಗಳನ್ನು ಕೆ.ಎಸ್.ಆರ್.ಟಿ.ಸಿ.ಯ www.ksrtc.in ವೆಬ್ಸೈಗಟ್ದಗಲ್ಲಿ ಹಾಗೂ ಸಂಸ್ಥೆಯ / ಪ್ರಾಂಚೈಸಿ ಕೌಂಟರ್ ಗಳಲ್ಲೂ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಸಾರಿಗೆ ಬಸ್ಸು ಸೌಲಭ್ಯದ ಸದುಪಯೋಗಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. 

ಸುದ್ದಿ ಓದಿ