ಪಾರದರ್ಶಕವಾಗಿ ಸಮೀಕ್ಷೆ ಮಾಡಿ ವರದಿ ನೀಡಿ: ಬಳ್ಳಾರಿ
ಬ್ಯಾಡಗಿ04: ಕಂದಾಯ ಮತ್ತು ಕೃಷಿ ಇಲಾಖೆಯ ಸಿಬ್ಬಂದಿಯವರು ತಾಲೂಕಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆಹಾನಿ ಮತ್ತು ಮನೆಹಾನಿ ಕುರಿತು ಪಾರದರ್ಶಕವಾಗಿ ಸಮೀಕ್ಷೆ ಮಾಡಿ ವರದಿಯನ್ನು ನೀಡಬೇಕು. ಈ ಬಗ್ಗೆ ಯಾವುದೇ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆಯನ್ನು ತೋರಿ ರೈತರಿಗೆ ಹಾಗೂ ಬಡಜನರಿಗೆ ಅನ್ಯಾಯವಾದರೆ ಅಂತಹ ಸಿಬ್ಬಂದಿಯನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಎಚ್ಚರಿಸಿದರು.
ತಾಲೂಕಿನ ಮುತ್ತೂರು ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ವತಿಯಿಂದ ಕೈಗೆತ್ತಿಕೊಳ್ಳಲಾದ ಒಂದು ಕೋಟಿ ರೂಗಳ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದÀರು.
ತಾಲೂಕಿನಲ್ಲಿ ಕಳೆದ ಬಾರಿ ನೀಡಿರುವ ತಪ್ಪು ವರದಿಗಳಿಂದ ಬಹಳಷ್ಟು ಜನರಿಗೆ ಸೂಕ್ತ ಪರಿಹಾರ ದೊರಕದೆ ಅನ್ಯಾಯಕ್ಕೆ ಒಳಗಾಗಿದ್ದಾರೆ. ಈ ಬಾರಿ ಅದು ಪುನರಾವರ್ತನೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆಯನ್ನು ನೀಡಿದರು.ದೇವಸ್ಥಾನಗಳಿಗೆ ಹೆಚ್ಚು ಅನುದಾನ..!!ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಿಗೆ ರಾಜ್ಯ ಸರ್ಕಾರದಿಂದ ನೀಡುವ ಎರಡು ಕೋಟಿ ರೂಗಳ ಅನುದಾನದಲ್ಲಿ ಒಂದು ಕೋಟಿಯನ್ನು ದೇವಸ್ಥಾನಗಳ ಅಭಿವೃದ್ಧಿಗೆ ನೀಡಲು ಅವಕಾಶ ಕೋರಲಾಗಿದೆ. ಅಲ್ಲದೇ ಮುಜರಾಯಿ ಇಲಾಖೆಯಿಂದಲೂ ದೇವಸ್ಥಾನಗಳ ನಿರ್ಮಾಣ ಹಾಗೂ ಜೀರ್ಣೋದ್ಧಾರಕ್ಕೆ ಹೆಚ್ಚು ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅವರ ಗಮನವನ್ನು ಸೆಳೆದಿರುವುದಾಗಿi ತಿಳಿಸಿದರು.ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ಸುರೇಶ ಬೇಡರ ಯೋಜನೆಯ ಅನುಷ್ಠಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಹರಿಜನ ವಹಿಸಿದ್ದರು. ಪಿ.ಎಲ್’ಡಿ ಬ್ಯಾಂಕ್ ಸದಸ್ಯ ಸುರೇಶ ಯತ್ನಳ್ಳಿ, ಎಸ್ ಎನ್. ಮಾತನವರ, ಕೆಡಿಪಿ ಸದಸ್ಯ ಎಸ್.ಎನ್.ಜಿಗಳಿಕೊಪ್ಪ, ಶಿವಯೋಗೆಪ್ಪ ಉಕ್ಕುಂದ, ಅರ್ಜುನಪ್ಪ ಲಮಾಣಿ, ಗ್ರಾಪಂ ಉಪಾಧ್ಯಕ್ಷ ಕರಿಯಪ್ಪ ಹೊಸಳ್ಳಿ, ಶಿವಪುತ್ರಪ್ಪ ಧೂಳಿಕೊಪ್ಪ, ಮಂಜಪ್ಪ ಹೊಸಳ್ಳಿ, ಕುಸುಮಾ ಗೆಜ್ಜೇರ, ಪ್ರಕಾಶ ಬೂದಿಹಾಳ, ಶಿವಪುತ್ರಪ್ಪ ಕುಂಚೂರ, ಪಿಡಿಓ ಶೋಭಾ ನಾಯ್ಕ, ಕಾರ್ಯದರ್ಶಿ ಫಕ್ಕಿರೇಶ ಅಂಗಡಿ, ಗುತ್ತಿಗೆದಾರ ರವಿ ಲಮಾಣಿ, ಎನ್.ಜಿ.ಜಾಧವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನೀರನ್ನು ಮಿತವ್ಯಯವಾಗಿ ಬಳಸಿರಿ..!! ಗ್ರಾಮೀಣ ಪ್ರದೇಶದಲ್ಲಿ ಜನರು ನೀರನ್ನು ಅನಾವಶ್ಯಕವಾಗಿ ಹೆಚ್ಚು ಪೆÇೀಲು ಮಾಡದೇ ಮಿತವ್ಯಯವಾಗಿ ಬಳಸುವ ಅಗತ್ಯವಿದೆ. ಈಗಾಗಲೇ ರಾಜ್ಯಾದ್ಯಂತ ಶೌಚಾಲಯ ಮುಕ್ತ ಹಾಗೂ ಹೊಗೆ ಮುಕ್ತ ಯೋಜನೆಗಳಿಗೆ ಚಾಲನೆ ನೀಡಿ ಯಶಸ್ಸನ್ನು ಸಾಧಿಸಿದ್ದೇವೆ. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಲಜೀವನ ಮಿಷನ್ (ಮನೆ ಮನೆಗೆ ಗಂಗೆ) ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವ ಗುರಿಯನ್ನು ಹೊಂದಲಾಗಿದೆ.
-ವಿರೂಪಾಕ್ಷಪ್ಪ ಬಳ್ಳಾರಿ ಶಾಸಕರು...