ಶಿಗ್ಗಾವ್

ವರ್ಗಾವಣೆಯಾದ ಶಿಕ್ಷಕರಿಗೆ ಡಿ.ಎಸ್‌.ಎಸ್ ವತಿಯಿಂದ ಸನ್ಮಾನ

ವರ್ಗಾವಣೆಯಾದ ಶಿಕ್ಷಕರಿಗೆ ಡಿ.ಎಸ್‌.ಎಸ್ ವತಿಯಿಂದ ಸನ್ಮಾನ

ಶಿಗ್ಗಾವಿ 11: ತಾಲೂಕಿನ ಕ್ಯಾಲಕೊಂಡ ಗ್ರಾಮದ ಶ್ರೀಮತಿ ಮಲ್ಲಮ್ಮ ಕೋಂ ರಾಮಣ್ಣ ಮಂಡಿಗನಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿ ನೀಲಮ್ಮ ಕೊಣ್ಣೂರ. ಹಾಗೂ ಕನ್ನಡ ಶಿಕ್ಷಕಿ ವಾಣಿಶ್ರೀ ಪುರಂದರೆ. ಮತ್ತು ಇಂಗ್ಲಿಷ್ ಶಿಕ್ಷಕ ವಿಜಯ ದೇಶಪಾಂಡೆ. ಇವರೆಲ್ಲರೂ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಡಿ.ಎಸ್‌.ಎಸ್ ಮತ್ತು ಬಿಜೆಪಿ ಎಸ್ಸಿ ಮೋರ್ಚಾ ಶಿಗ್ಗಾಂವ ತಾಲೂಕ ಅಧ್ಯಕ್ಷ ಹನುಮಂತಪ್ಪ ಹರಿಜನ ಹಾಗೂ ಕ್ಯಾಲಕೊಂಡ ಮಾಜಿ ಗ್ರಾ.ಪಂ ಸದಸ್ಯರಾದ ರೇಣುಕಾ.ಹ.ಹರಿಜನ ಅವರು ಸೇರಿ ಬಿಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿದರು. 

 ಡಿ.ಎಸ್‌.ಎಸ್‌. ಮತ್ತು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತಪ್ಪ ಹರಿಜನ ನಂತರ ಮಾತನಾಡಿದ ಅವರು ಸಮಾಜದಲ್ಲಿನ ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು. ಯಾವುದೇ ಫಲಾಪೇಕ್ಷೆಯಿಲ್ಲದೇ ಶಿಕ್ಷಕರು ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದುಕೊಡುತ್ತಿದ್ದಾರೆ. ಆ ಕಾರಣದಿಂದಲೇ ಶಿಕ್ಷಕರಿಗೆ ಸಮಾಜದಲ್ಲಿ ಗೌರವ ಸಿಗುತ್ತಿದೆ. ವಿದ್ಯ ಕಲಿಸಿದ ಗುರುವನ್ನು ಎಂದೂ ಮರೆಯದೆ ಪೂಜ್ಯ ಸ್ಥಾನದಲ್ಲಿ ಗೌರವಿಸಬೇಕು, ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳಬೇಕು. ಈ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ನಿಮ್ಮ ಈ ವರ್ಗಾವಣೆ ನಮಗೆಲ್ಲಾ ತುಂಬಾ ನೋವು ತಂದಿದೆ. ಕೂಡುವುದು ಸಹಜ, ಅಗಲುವುದು ಅನಿವಾರ್ಯ ಎಂಬಂತೆ ನಿಮ್ಮ ಮುಂದಿನ ವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.  

ಈ ಸಂದರ್ಭದಲ್ಲಿ  ಮುಖ್ಯೋಪಾಧ್ಯಾಯರು ಲಕ್ಷ್ಮಣ ಜಂಬಗಿ. ಶಿಕ್ಷಕರಾದ 

ನಾಗೇಶ್ ಈಟಿ, ನವೀನಕುಮಾರ, ಮಾಜಿ ಗ್ರಾ.ಪಂ ಸದಸ್ಯ ಗದಿಗೆಪ್ಪ ಮಲ್ಲಾಪುರ, ಗ್ರಾ.ಪಂ ಸದಸ್ಯ ಶರಣಪ್ಪ ಅಯ್ಯಣ್ಣವರ, ಜಾಫರ್ ಭಾಗವಾನ, ಮಾಂತೇಶ ಮುಶೆಮ್ಮನವರ, ಧರ್ಮಣ್ಣ ಉಳ್ಳಟ್ಟಿ. ಹಾಗೂ ಇನ್ನೂ ಅನೇಕ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕ್ಯಾಲಕೊಂಡ ಗ್ರಾಮದ ಸಮಸ್ತ ಗುರು-ಹಿರಿಯರು ಯುವಕರು ಉಪಸಿತರಿದ್ದರು. 


ಸುದ್ದಿ ಓದಿ