ಸೌಂದತ್ತಿ

ಸಂದೀಪ ನಾಗಸಂಪಿಗೆ ವರ್ಗಾವಣೆ: ಬೀಳ್ಕೊಡುಗೆ

ಸಂದೀಪ ನಾಗಸಂಪಿಗೆ ವರ್ಗಾವಣೆ: ಬೀಳ್ಕೊಡುಗೆ

ಸವದತ್ತಿ 23: ಆರ್ಥಿಕ ಸಂಸ್ಥೆಗಳ ಅಭಿವೃದ್ಧಿಗೆ ಬ್ಯಾಂಕಿನ ಸಿಬ್ಬಂದಿಯಷ್ಟೆ, ಬ್ಯಾಂಕಿನ ಗ್ರಾಹಕರ ಸಹಕಾರವು ಬಹುಮುಖ್ಯವಾಗಿದ್ದು, ಸವದತ್ತಿ ಕೆವಿಜಿ ಬ್ಯಾಂಕಿನ ಗ್ರಾಹಕರು ನಮ್ಮ ಸಿಬ್ಬಂದಿಯೊಂದಿಗೆ ನೀಡಿದ ಸಹಕಾರವನ್ನು ಎಂದೂ ಮರೆಯುವಂತಿಲ್ಲ ಎಂದು ಕೆವಿಜಿ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಸಂದೀಪ ನಾಗಸಂಪಿಗೆ ಹೇಳಿದರು. 

ಪಟ್ಟಣದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಹಿರಿಯ ವ್ಯವಸ್ಥಾಪಕ ಸಂದೀಪ ನಾಗಸಂಪಿಗೆಯವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಬ್ಯಾಂಕಿನ ಗ್ರಾಹಕರು ಮತ್ತು ಸಿಬ್ಬಂದಿಯವರು ಹಮ್ಮಿಕೊಂಡ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ಸವದತ್ತಿಯ ಕೆವಿಜಿಬಿ ಶಾಖೆಯು ಉತ್ತಮ ಪ್ರಗತಿಯಲ್ಲಿದ್ದು, ಇಲ್ಲಿ ನನಗೆ ಅಲ್ಪಾವಧಿಯವರೆಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದರೂ ಸಹಿತ ಅಷ್ಟೆ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಆತ್ಮತೃಪ್ತಿ ನನಗಿದೆ ಎಂದರು. ಬ್ಯಾಂಕಿನ ನಿಯಮಾವಳಿಯಂತೆ ವರ್ಗಾವಣೆ ಸಹಜವಾಗಿದ್ದು, ಅದರಂತೆ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಶಾಖೆಗೆ ಹೋಗುತ್ತಿರುವದಾಗಿ ಹೇಳಿದರು. 

ಹಿರೇಪಡಸಲಗಿ ಶಾಖೆಯಿಂದ ವರ್ಗಾವಣೆಗೊಂಡು ಆಗಮಿಸಿದ ಹಿರಿಯ ವ್ಯವಸ್ಥಾಪಕ ಸುನೀಲ ಸಂಪಂಡಿಯವರನ್ನು ಶಾಖೆಯ ಸಿಬ್ಬಂದಿ ಸ್ವಾಗತಿಸಿ ಬರಮಾಡಿಕೊಂಡರು. 

ಮನೋಹರ ಶೆಟ್ಟರ, ಕೇದಾರ ಮೊಖಾಶಿ, ಪುಂಡಲೀಕ ಭೀ. ಬಾಳೋಜಿ, ಮಹಾಂತೇಶ ಹಿರೇಮಠ, ಸಿದ್ದಯ್ಯ ಪಾಟೀಲ, ವಿ.ಜೆ.ಪವಾರ, ರವಿ ಮೊಕಾಶಿ, ಬ್ಯಾಂಕಿನ ಸಿಬ್ಬಂದಿಗಳಾದ ಕವಿತಾ ಹಿರೇತನದ, ಎಸ್‌.ರಾಜು, ಕಾವ್ಯಶ್ರೀ, ಪ್ರಶಾಂತಿ, ಮಹೇಶ ಮಡಿವಾಳರ, ದಾವಲಸಾಬ ಕಾಲೇರಿ, ಡೋಂಗರೆಸಾಬ ನದಾಫ, ಕೇಶವ ಜೋಶಿ ಉಪಸ್ಥಿತರಿದ್ದರು. 


ಸುದ್ದಿ ಓದಿ