ರಾಷ್ಟ್ರೀಯ

ಟಿಟಿಡಿ ಇಓ ಅನಿಲ್ ಕುಮಾರ್ ಸಿಂಘಾಲ್ ರಾತ್ರೋ ರಾತ್ರಿ ವರ್ಗಾವಣೆ

ಟಿಟಿಡಿ  ಇಓ   ಅನಿಲ್ ಕುಮಾರ್ ಸಿಂಘಾಲ್  ರಾತ್ರೋ ರಾತ್ರಿ ವರ್ಗಾವಣೆ

ತಿರುಪತಿ, ಅಕ್ಟೋಬರ್.1:ಆಂಧ್ರ ಪ್ರದೇಶ ರಾಜ್ಯ   ಸರ್ಕಾರ  ತಿರುಮಲ ತಿರುಪತಿ ದೇವಸ್ಥಾನ( ಟಿಟಿಡಿ)  ಕಾರ್ಯ ನಿರ್ವಹಣಾಧಿಕಾರಿ  ಅಧಿಕಾರಿ  ಅನಿಲ್ ಕುಮಾರ್ ಸಿಂಘಾಲ್ ಅವರನ್ನು   ಕಳೆದ ಮಧ್ಯ ರಾತ್ರಿ ವರ್ಗಾಯಿಸಿದೆ.

ಟಿಟಿಡಿಯಲ್ಲಿ ಮೂರು ವರ್ಷಗಳ ಸೇವಾವಧಿ ಪೂರ್ಣಗೊಳಿಸಿದ್ದ   ಸಿಂಘಾಲ್ ಅವರನ್ನು   ಆರೋಗ್ಯ, ವೈದ್ಯಕೀಯ ಹಾಗೂ ಕುಟುಂಬ ಕಲ್ಯಾಣ  ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

ಹೆಚ್ಚುವರಿ   ಕಾರ್ಯ ನಿರ್ವಾಹಕ ಅಧಿಕಾರಿ ಎ.ವಿ.ಧರ್ಮಾರೆಡ್ಡಿ ಅವರಿಗೆ  ಟಿಟಿಡಿ  ಕಾರ್ಯ ನಿರ್ವಾಹಕ ಅಧಿಕಾರಿಯಾಗಿ  ಹೆಚ್ಚುವರಿ ಹೊಣೆ ವಹಿಸಲಾಗಿದೆ.

1993ನೇ ತಂಡದ ಐಎಎಸ್ ಅಧಿಕಾರಿಯಾಗಿರುವ  ಅನಿಲ್ ಕುಮಾರ್ ಸಿಂಘಾಲ್  ಅವರನ್ನು  2017ರ ಮೇ 1ರಂದು ಹಿಂದಿನ ಟಿಟಿಪಿ ಸರ್ಕಾರ  ಟಿಟಿಡಿ  ಕಾರ್ಯ ನಿರ್ವಹಣಾಧಿಕಾರಿಯಾಗಿ ನೇಮಿಸಿತ್ತು

ಸಿಂಘಾಲ್ ಅವರ  ಅವರ ಅವಧಿಯಲ್ಲಿ   ದೇಗುಲದ ಆಭರಣಗಳ ನಾಪತ್ತೆ, ಆರ್ಚಕರ ವಂಶಪಾರಂಪರ್ಯ ಹಕ್ಕುಗಳು, ಎ.ವಿ. ರಮಣ ದೀಕ್ಷಿತಲು ಅವರನ್ನು ಮುಖ್ಯ ಆರ್ಚಕ ಸ್ಥಾನದಿಂದ ವಜಾ ವಿವಾದಗಳು  ಹಾಗೂ ಇತ್ತಿಚಿನ  ತಿರುಪತಿ ದೇಗುಲ ಭೂಮಿಯ ಉದ್ದೇಶಿತ ಹರಾಜು  ಮಾತುಗಳು ಕೇಳಿಬಂದಿದ್ದವು

ಪ್ರಸಿದ್ದ  ಅಣ್ಣಾಮಾಚಾರ್ಯ  ಕೀರ್ತನೆಗಳ ಗಾಯಕಿ  ಡಾ. ಶೋಭಾ ರಾಜು ಅವರನ್ನು  ಟಿಟಿಡಿಯ  ಸಂಗೀತ ವಿದ್ವಾನ್  ಆಗಿ   ಸಿಂಘಾಲ್  ಅವರು ಇತ್ತೀಚಿಗೆ  ನೇಮಿಸಿದ್ದರು. ಈ ನೇಮಕವನ್ನು ರಾಜ್ಯ ಸರ್ಕಾರ ನಿನ್ನೆ ಅನುಮೋದಿಸಿದೆ.

ಸುದ್ದಿ ಓದಿ