ರಾಣೆಬೆನ್ನೂರ

ಹೆಚ್ಚುವರಿ ಶಿಕ್ಷಕರ ವರ್ಗಾವಣೆ: ಅವಕಾಶ ವಂಚಿತರಗಿ ಪುನಃ ಕಲ್ಪಸಲು ಮನವಿ

ಹೆಚ್ಚುವರಿ ಶಿಕ್ಷಕರ ವರ್ಗಾವಣೆ: ಅವಕಾಶ ವಂಚಿತರಗಿ ಪುನಃ ಕಲ್ಪಸಲು ಮನವಿ


ಲೋಕದರ್ಶನ ವರದಿ 

ರಾಣೇಬೆನ್ನೂರು 29: 2019 ಮತ್ತು 2020 ನೇ ಸಾಲಿನ ಕಡ್ಡಾಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ಬಹಳಷ್ಟು ಶಿಕ್ಷಕರು ಅವಕಾಶ ಸಿಗದೆ ವಂಚಿತರಾಗಿದ್ದು, ಅವರಿಗೆ ಪುನಃ ಅವಕಾಶ ಕಲ್ಪಿಸಲು ಮುಂದಾಗಬೇಕೇಂದು ಅವಕಾಶ ವಂಚಿತ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ಅಧ್ಯಕ್ಷರಾದ ಎಸ್‌.ಎನ್ ಬೀರಜ್ಜನವರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 

ಈ ಕುರಿತು ಸ್ಥಳಿಯ ಗುರು ಭವನ ಸಂಘದ ಕಾರ್ಯಾಲಯದಲ್ಲಿ ಅವಕಾಶ ವಂಚಿತ ಶಿಕ್ಷಕ ಸಮುದಾಯವು ಗುರುವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ  ರವಿ ಗೋಣೇಪ್ಪನವರ, ತಾಲುಕಾ ಕಾರ್ಯದರ್ಶಿ ಸುರೇಶ ಕೋಟಿಹಾಳ, ಸಂಘದ ಮುಖಂಡರಾದ ಅನ್ವರ್ ಖಾಜಿ, ಐ.ಎಸ್ ಕಿಲ್ಲೇದಾರ, ವೈ.ಜೆ. ಹರಗೋಲ, ಮತ್ತಿತರರು ಉಪಸ್ಥಿತರಿದ್ದರು. 

ಮನವಿ ಸಲ್ಲಕೆ ಮುಂಚೂಣಿಯಲ್ಲಿ ಪಿ.ಸಿ. ಪೀರಜಾದೆ, ಎನ್‌.ಎ ಸವಣೂರ, ಎಸ್‌. ಎ ಗುರನ್ನಿ, ಎಂ.ಎ ಕುಲಕರ್ಣಿ, ಎ.ಎಂ ಅತ್ತಾರ, ಐ.ಡಿ. ಹೆಡಿಯಾಲ, ಎಂ.ಬಿ. ಕುಪ್ಪೇಲೂರ, ಮುಂತಾದವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ