ಎಲಬುರ್ಗ

ಪಿಆರ್‌ಒ, ಪಿಒ ರವರಿಗೆ ಇವಿಎಂ, ವಿವಿಪ್ಯಾಟ್ ಕುರಿತು ತರಬೇತಿ

ಪಿಆರ್‌ಒ, ಪಿಒ ರವರಿಗೆ ಇವಿಎಂ, ವಿವಿಪ್ಯಾಟ್ ಕುರಿತು ತರಬೇತಿ

ಯಲಬುರ್ಗಾ 14: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯ ಕುರಿತು ಏ.16 ರಂದು ಜರುಗುವ ಮತಗಟ್ಟೆ ಅಧಿಕಾರಿಗಳ ತರಬೇತಿ ನೀಡಲು 10 ಕೊಠಡಿಗಳ ತರಬೇತಿ ನೀಡಲು ಸೆಕ್ಟರ್ ಅಧಿಕಾರಿ ಹಾಗೂ ಇವಿಎಂ ಮಾಸ್ಟರ್ ತರಬೇತುದಾರರಿಗೆ ಜಿಲ್ಲಾ ಪ್ರಾಚಾರ್ಯರಾದ ಕೃಷ್ಣಮುರ್ತಿ ದೇಸಾಯಿ ಇವರ ನೇತೃತ್ವದಲ್ಲಿ ತರಬೇತಿ ಕಾರ್ಯಾಗಾರ ನಡೆಯಿತು. 

ಮತಗಟ್ಟೆಗಳಲ್ಲಿ ಅಧ್ಯಕ್ಷ ಅಧಿಕಾರಿ, ಮತ್ತು ಮತದಾನ ಅಧಿಕಾರಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಮತ್ತು ವಿದ್ಯುನ್ಮಾನ ಮತ ಯಂತ್ರಗಳ ಉಪಯೋಗಿಸುವ ವಿಧಾನದ ಕುರಿತು ತರಬೇತಿ ನೀಡಿದರು. ಈ ಸಭೆಯನ್ನುದ್ದೇಶಿಸಿ ಮಾನ್ಯ ಚುನಾವಣಾಧಿಕಾರಿಗಳಾದ ಕಾವ್ಯರಾಣಿ ಕೆ.ವಿ.ಅವರು ಮಾತನಾಡುತ್ತಾ, ಮತಗಟ್ಟೆಗೆ ನಿಯೋಜನೆಗೊಂಡ ಮತದಾನದ ವಿಧಾನದ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸನ್ನದ್ದಗೊಳಿಸುವಂತೆ ಸೆಕ್ಟರ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲು ಸೂಚಿಸಿದರು. 

 ಸಭೆಯಲ್ಲಿ ಇವಿಎಂ ಮಾಸ್ಟರ್ ಟ್ರೈನರ್ ಯಲ್ಲಪ್ಪ, ಸಹಾಯಕ ಚುನಾವಣಾಧಿಕಾರಿಗಳಾದ ವಿಠಲ ಚೌಗಲೆ ಹಾಗೂ ಪಿಆರ್ ಒ, ಪಿಒ, ತರಬೇತುದಾರರು, ಚುನಾವಣಾಧಿಕಾರಿ ಕಾರ್ಯಾಲಯದ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು. 


ಸುದ್ದಿ ಓದಿ