ಶಾಲಾ ಸಿದ್ದಿ ಕಾರ್ಯಕ್ರಮ: ಮುಖ್ಯೋಪಾಧ್ಯಾಯರಿಗೆ ತರಬೇತಿ
ಬೈಲಹೊಂಗಲ 12: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರುಗಳ ಆಶ್ರಯದಲ್ಲಿ ಪಟ್ಟಣದ ಸರಕಾರಿ ಮಾದರಿ ಶಾಲೆ ನಂ.1 ರಲ್ಲಿ ನಡೆದ 2020 21 ನೇ ಸಾಲಿನ ಶಾಲಾ ಸಿದ್ದಿ ಕಾರ್ಯಕ್ರಮದ ಅಂಗವಾಗಿ ಮುಖ್ಯೋಪಾಧ್ಯಾಯರಿಗೆ ಒಂದು ದಿನದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್. ಕಸಾಳೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಯ ನೈಜ ಅಂಶಗಳನ್ನು ಶಾಲಾ ಸಿದ್ದಿ ಕಾರ್ಯಕ್ರಮದ ಮುಖ್ಯ ಏಳುಕ್ಷೇತ್ರಗಳಲ್ಲಿ ಸರಿಯಾಗಿ ತುಂಬಿ ಆನಲೈನಲ್ಲಿ ಅಫ್ಲೋ ಡ್ ಮಾಡುವುದರಿಂದ ಶಾಲೆಗೆ ಬೇಕಾದ ಸಂಪೂರ್ಣ ಸೌಲಭ್ಯಗಳನ್ನು ಪಡೆದುಕೊಂಡು ಶಾಲೆ ಸವಾರ್ಂಗೀಣ ಅಭಿವೃದ್ಧಿ ಮಾಡಬಹುದೆಂದು ತಿಳಿಸಿದರು. ಮುಖ್ಯೋಪಾಧ್ಯಾಯ ಬಿ. ಡಿ. ತಮ್ಮಣ್ಣವರ್ ನೋಡಲ್ ಅಧಿಕಾರಿ ಅಜ್ಜಪ್ಪ ಅಂಗಡಿ, ಪಿ.ಪಿ. ಸೊಂಟಕ್ಕಿ, ಎಸ್.ಬಿ. ನೇಸರಗಿ, ಎನ್. ಜಿ. ನದಾಫ ಹಾಗೂ ಶಿಕ್ಷಕರು ಇದ್ದರು.