ಚಿಕ್ಕೋಡಿ

ಯುವಕರಿಗೆ ಸಂಚಾರಿ ನಿಯಮ, ಗುಣಮಟ್ಟದ ತರಬೇತಿ ಅವಶ್ಯಕ ; ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಸಲಹೆ: ಚಿಕ್ಕೋಡಿ ತಾಲೂಕಾ ಮೋಟರ ಡ್ರೈವಿಂಗ್ ಶಾಲೆಯ ಮಾಲಿಕರ ಅಸೋಶಿಯೇಷನ ಉದ್ಘಾಟನೆ

ಯುವಕರಿಗೆ ಸಂಚಾರಿ ನಿಯಮ, ಗುಣಮಟ್ಟದ ತರಬೇತಿ ಅವಶ್ಯಕ ; ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಸಲಹೆ: ಚಿಕ್ಕೋಡಿ ತಾಲೂಕಾ ಮೋಟರ ಡ್ರೈವಿಂಗ್ ಶಾಲೆಯ ಮಾಲಿಕರ ಅಸೋಶಿಯೇಷನ ಉದ್ಘಾಟನೆ

ಲೋಕದರ್ಶನ ವರದಿ 


ಚಿಕ್ಕೋಡಿ: ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದಂತೆ ವಾಹನಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಹೀಗಾಗಿ ಯುವ ಸಮುದಾಯಕ್ಕೆ ಸಂಚಾರಿ ನಿಯಮದ ಜೊತೆಗೆ ಗುಣಮಟ್ಟದ ವಾಹನ ತರಬೇತಿ ಅವಶ್ಯಕವಾಗಿದೆ. ಡ್ರೈವಿಗ್ ಶಾಲೆಗಳು ಪರಿಪೂರ್ಣ ತರಬೇತಿ ನೀಡಲು ಮುಂದೆ ಬಂದಾಗ ರಸ್ತೆ ಅಪಘಾತಗಳನ್ನು ತಡೆಯಲು ಸಾಧ್ಯವಿದೆ ಎಂದು ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಹೇಳಿದರು. 

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ತಾಲೂಕಾ ಮೋಟರ ಡ್ರೈವಿಂಗ್ ಶಾಲೆಯ ಮಾಲಿಕರ ಅಸೋಶಿಯೇಷನ ಉದ್ಘಾಟಿಸಿ ಅವರು ಮಾತನಾಡಿದರು. ಅಸೋಶಿಯೆಷನ್ ಕಟ್ಟಿಕೊಳ್ಳಬೇಕಾದರೇ ಎಲ್ಲರ ಜೊತೆ ಹೊಂದಾಣಿಕೆ ಇರಬೇಕಾಗುತ್ತದೆ. ಯಾವುದೇ ಸಂಘ-ಸಂಸ್ಥೆಯಲ್ಲಿ ಸದಸ್ಯರು ಮತ್ತು ಪದಾಧಿಕಾರಿಗಳ ಮಧ್ಯೆ ಒಂದಿಲ್ಲೊಂದು ವೈಮನಸ್ಸು ಇದ್ದೇ ಇರುತ್ತದೆ. ಸಣ್ಣ ಸಣ್ಣ ವಿಷಯಕ್ಕೆ ವೈಮನಸ್ಸು ಮಾಡಿಕೊಂಡು ಸಂಘದ ಕಾರ್ಯ ಚಟುವಟಿಕೆಯಿಂದ ದೂರ ಉಳಿಯುವುದು ಸರಿಯಾದ ಕ್ರಮವಲ್ಲ, ಎಲ್ಲರೂ ಒಗ್ಗಟ್ಟಾಗಿ ಇದ್ದರೇ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತದೆ ಎಂದರು. 

ಚಿಕ್ಕೋಡಿಯಲ್ಲಿ ಇರುವ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ದಿನನಿತ್ಯ ಸಾವಿರಾರು ಜನರು ಚಾಲನಾ ಪರವಾಣಗಿ ಪಡೆಯಲು ಆಗಮೀಸುವ ಜನರಿಗೆ ಡ್ರೈವಿಂಗ್ ಶಾಲೆಗಳು ಅವರಿಗೆ ಸೂಕ್ತ ಮಾಹಿತಿ ಮತ್ತು ಚಾಲನಾ ತರಬೇತಿ ನೀಡಿದರೇ ಅನುಕೂಲವಾಗಲಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಡಾ,ಅಂಬೇಡ್ಕರ ಜನಜಾಗೃತಿ ವೇದಿಕೆ ತಾಲೂಕಾ ಉಪಾಧ್ಯಕ್ಷ ಅಪ್ಪಾಸಾಹೇಬ ಬ್ಯಾಳಿ ಮಾತನಾಡಿ, ರಸ್ತೆ ಅಪಘಾತ ಪ್ರಮಾಣ ತಡೆಯಲು ವಾಹನ ಚಾಲನಾ ತರಬೇತಿ ಕಾರ್ಯ ಬಹುಮುಖ್ಯವಾಗಿದೆ. ಆದ್ದರಿಂದ ಚಾಲನಾ ತರಬೇತಿ ಪಡೆಯುವ ಚಾಲಕರಿಗೆ ಪರಿಪೂರ್ಣ ತರಬೇತಿ ನೀಡುವ ಮೂಲಕ ರಸ್ತೆ ಅಪಘಾತ ಪ್ರಮಾಣ ಕಡಿಮೆ ಮಾಡಲು ಈ ಅಸೋಶಿಯೇಷನ ಶ್ರಮ ಪಡಬೇಕು.  

ಸರ್ಕಾರ ಹೊರಡಿಸಿರುವ ರಸ್ತೆ ನಿಯಮಗಳನ್ನು ಯಾರು ಪಾಲಿಸುತ್ತಾರೇ ಅಂಥವರು ಪರಿಪೂರ್ಣವಾಗಿ ಚಾಲಕರಾಗಿ ಹೊರಹೊಮ್ಮುತ್ತಾರೆ. ರಸ್ತೆ ನಿಯಮಗಳನ್ನು ಕಡ್ಡಾಗಿ ಪಾಲಿಸಿದರೇ ಅಪಘಾತ ಪ್ರಮಾಣ ಕಡಿಮೆ ಆಗುತ್ತದೆ. ಹೀಗಾಗಿ ಮೋಟರ ಡ್ರೈವಿಂಗ ಶಾಲೆಗಳು ಚಾಲನೆಗೆ ಅವಕಾಶ ಪಡೆಯುವ ಪ್ರತಿಯೊಬ್ಬರಿಗೆ ಕಡ್ಡಾಯವಾಗಿ ರಸ್ತೆ ನಿಯಮಗಳನ್ನು ತಿಳಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣವಾಗಲು ಕೈಜೋಡಿಸಬೇಕು ಎಂದರು.  

ಈ ಸಂದರ್ಭದಲ್ಲಿ ಚಿಕ್ಕೋಡಿ ತಾಲೂಕಾ ಮೋಟರ ಡ್ರೈವಿಂಗ್ ಶಾಲೆಯ ಮಾಲಿಕರ ಅಸೋಶಿಯೇಷನ ಉಪಾಧ್ಯಕ್ಷ ನಿಯಾಜ ಬುಡೆಖಾನ, ಕಾರ್ಯದರ್ಶಿ ವಿನಾಯಕ ಚೌಗಲೆ, ಖಜಾಂಚಿ ರಾಜು ಚಂದಗಡೆ, ಸದಸ್ಯರಾದ ಸ್ವಪ್ನಿಲ ಅವಳೇಕರ, ಬಜರಂಗ ಮೋರೆ, ರೋಹನ ಪವಾರ, ಸಪೀ ಕಂಕಣವಾಡಿ, ಪ್ರಶಾಂತ ಕುಸ್ತಿಗಾರ, ಜಯಶ್ರೀ ದೇಸಾಯಿ, ಸೂರಜ ನಾರೆ, ಮಾರುತಿ ಮಾಳಿ, ಅಮಿತ ಬಾಳನಾಯಿಕ, ಜ್ಯೋತಿರಾಮ ಪವಾರ, ಗಜೇಂದ್ರ ಮುನ್ನೋಳ್ಳಿಕರ, ನಾಗರಾಜ ಮುನ್ನೋಳ್ಳಿಕರ  ಮುಂತಾದವರು ಇದ್ದರು.   

ಚಿಕ್ಕೋಡಿ ತಾಲೂಕಾ ಮೋಟರ ಡ್ರೈವಿಂಗ ಶಾಲೆಯ ಮಾಲಿಕರ ಅಸೋಸೆಶನ್ ಅಧ್ಯಕ್ಷ ಎಂ.ಆರ್‌.ಮುನ್ನೋಳ್ಳಿಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 


ಸುದ್ದಿ ಓದಿ