ರಾಣೆಬೆನ್ನೂರ

ಏಡ್ಸ್‌ ಸಂಪೂರ್ಣ ನಿಯಂತ್ರಣಕ್ಕೆ ಸಹಭಾಗಿತ್ವ ಅಗತ್ಯ: ಜಗದೀಶ್ ಪಾಟೀಲ್

ಏಡ್ಸ್‌ ಸಂಪೂರ್ಣ ನಿಯಂತ್ರಣಕ್ಕೆ ಸಹಭಾಗಿತ್ವ ಅಗತ್ಯ: ಜಗದೀಶ್ ಪಾಟೀಲ್

ರಾಣೆಬೆನ್ನೂರು 04:  ಆಧುನಿಕ ವ್ಯವಸ್ಥೆಯಲ್ಲಿ ಎಲ್ಲ ರೋಗಗಳಿಗೂ ಓಷಧಿಯನ್ನು ಕಂಡುಹಿಡಿಯಲಾಗಿದೆ. ಅದರಂತೆ  ಏಡ್ಸ್‌ ರೋಗವನ್ನು ಸಹ ಗುಣಪಡಿಸಬಹುದಾಗಿದೆ ಅದಕ್ಕೆ ಸಾರ್ವಜನಿಕರ ಸಹಭಾಗಿತ್ವ ಬಹು ಮುಖ್ಯವಾಗಿದೆ ಎಂದು ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದ ಹಿರಿಯ ಚಿಕಿತ್ಸೆ ಮೇಲ್ವಿಚಾರಕ ಡಾ. ಜಗದೀಶ್ ಪಾಟೀಲ್ ಹೇಳಿದರು.  

ತಾಲೂಕಿನ ಸುಣಕಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂ.ಪ.ಪು ವಿದ್ಯಾಲಯದಲ್ಲಿ ನಡೆದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಏಡ್ಸ್‌ ಕಾಯಿಲೆ ಸುಮ್ಮ ಸುಮ್ಮನೆ ಬರಲಾರದು ಆ ಕಾಯಿಲೆ ಹರಡಲು ಅಸುರಕ್ಷಿತ ಲೈಂಗಿಕ ಕ್ರಿಯೆ ಕಾರಣ. ಅಸುರಕ್ಷಿತರು ಅನುಮಾನ ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸರಿಯಾದ ರೀತಿಯಲ್ಲಿ ಓಷಧೋಪಚಾರವನ್ನು ಪಡೇದಾಗ ಶೀಘ್ರವೇ ಗುಣ ಹೊಂದಲು ಸಾಧ್ಯವಾಗುತ್ತದೆ ಎಂದ ಅವರು ಸಮಾಜದಲ್ಲಿ ಸ್ವಾಸ್ಥ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು. ಕಾಲೇಜು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಅರಳಿ, ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಏನ್ ಎಸ್ ಎಸ್ ಅಧಿಕಾರಿ ಶಿವಾನಂದ ಹೆಚ್‌. ಉಪನ್ಯಾಸಕರಾದ ಮಹೇಶ್ ತುರ್ಕೆ, ಬಿ.ಎ.ವಿಜಯಕುಮಾರ್, ಶಿಕ್ಷಕಿ ಕೆ.ಎನ್ ರಾಧಿಕಾ, ಆಶಾ ಕಾರ್ಯಕರ್ತರಾದ, ಗಂಗಮಾಳಮ್ಮ ಕುಸುಗೂರು ಅಕ್ಕಮ್ಮ ಇಮ್ಮಡಿ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು, ಸಿಬ್ಬಂದಿ  ಸಾವಿರರಾ ರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ