ಧಾರಾಕಾರ ಮಳೆ:ತುಂಬಿ ಹರಿದ ಲಕ್ಷ್ಮಿ ಹಳ್ಳ
ಸಂಕೇಶ್ವರ 16: ಸಂಕೇಶ್ವರದಲ್ಲಿ ಮಧ್ಯಾಹ್ನ 3ಗಂಟೆ ಸುಮಾರಿಗೆ ಗುಡುಗು ಮಿಂಚು ಸಹಿತ ಸುರಿದ ಧಾರಾಕಾರ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಚರಂಡಿಗಳು ತುಂಬಿ ಲಕ್ಷ್ಮಿ ಹಳ್ಳಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಕಳೆದ ವರ್ಷ ಭೀಕರ ಬರಗಾಲ ಅನುಭವಿಸಿದ ಜನರಿಗೆ ರೈತಾಪಿ ವರ್ಗದವರಿಗೆ ಈ ಬಾರಿ ವರುಣನ ಕೃಪೆಯಿಂದ ಹರ್ಷ ಮನೆ ಮಾಡಿದೆ. ಮೈಯಲ್ಲಿ ಚೈತನ್ಯ ಮೂಡಿದಂತಾಗಿದ್ದು ಬಿತ್ತನೆಗೆ ಹುಮ್ಮಸ್ಸಿನಿಂದ ಸಿದ್ಧನಾಗುತ್ತಿದ್ದಾನೆ. ಒಟ್ಟಾರೆ ಮಳೆ ಅನ್ನದಾತನ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಈ ಮಳೆಯಿಂದ ಸುತ್ತಮುತ್ತಲಿನ ರೈತರು ಈಗಾಗಲೇ ಸೋಯಾ ಬಿತ್ತನೆ ಮಾಡಿದ್ದರು. ಕಳೆದ 3 ದಿನಗಳಿಂದ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು ರೈತರಿಗೆ ಆತಂಕ ಉಂಟಾಗಿತ್ತು. ಈ ಮಳೆಯಿಂದ ಈ ಭಾಗದ ರೈತರಿಗೆ ನೆಮ್ಮದಿ ತಂದಿದೆ.