ರಾಷ್ಟ್ರೀಯ

ಆತ್ಮ ನಿರ್ಭರ್ ಭಾರತ್ ಸಪ್ತಾಹಕ್ಕೆ ಸಚಿವ ರಾಜನಾಥ್ ಸಿಂಗ್ರಿಂದ ಇಂದು ಚಾಲನೆ

ಆತ್ಮ ನಿರ್ಭರ್ ಭಾರತ್ ಸಪ್ತಾಹಕ್ಕೆ ಸಚಿವ ರಾಜನಾಥ್ ಸಿಂಗ್ರಿಂದ ಇಂದು ಚಾಲನೆ

ನವದೆಹಲಿ, ಆಗಸ್ಟ್10: ಕೇಂದ್ರ ಸಕರ್ಾರದ ಮಹತ್ವಾಕಾಂಕ್ಷೆಯ 'ಆತ್ಮ ನಿರ್ಭರ್ ಭಾರತ್ ಸಪ್ತಾಹಕ್ಕೆ  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ (ಇಂದು)  ಚಾಲನೆ ನೀಡಲಿದ್ದಾರೆ. 

ಸಚಿವರ ಕಚೇರಿಯಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ.ಮೊದಲ ಹಂತದಲ್ಲಿ ರಕ್ಷಣಾ ವಲಯದಲ್ಲಿ 101 ಸಾಮಗ್ರಿಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದಕ್ಕೆ ನಿರ್ಬಂಧ ಹೇರುವ ಬಗ್ಗೆ ಕೇಂದ್ರ ಸಕರ್ಾರವು ತೀಮರ್ಾನಿಸಿದೆ. 2020ರ ಸಾಲಿನಿಂದಲೇ ಈ ಕ್ರಮವು ಜಾರಿಗೆ ಬರಲಿದ್ದು, ಮುಂದಿನ 2024ರವರೆಗೂ ಜಾರಿಯಲ್ಲಿರುತ್ತದೆ. 

ಕೊರೊನಾಸೋಂಕು ಹರಡುವಿಕೆ ಮತ್ತು ಲಾಕ್ ಡೌನ್ ನಿಂದಾಗಿ ಮೇ ತಿಂಗಳಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆತ್ಮನಿರ್ಭರ್ ಭಾರತ್ ನಿಮರ್ಾಣದ ಬಗ್ಗೆ ಪ್ರಸ್ತಾಪಿಸಿದ್ದರು. ಇದರ ಹಂತವಾಗಿ ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಉದ್ದೇಶ ಹೊಂದಲಾಗಿದೆ. ದೇಶವನ್ನು  ರಕ್ಷಣಾ ಕ್ರೇತ್ರದಲ್ಲಿ ಸದೃಢ ಮತ್ತು ಸ್ವತಂತ್ರ್ಯವನ್ನಾಗಿ ಮಾಡುವುದಕ್ಕೆ ಕೇಂದ್ರ ಈ ಮಹತ್ವದ ತೀಮರ್ಾನ  ತೆಗೆದುಕೊಂಡಿದೆ.  

 

ಸುದ್ದಿ ಓದಿ