ಇಂದು ರಾಜಗುರುಯೋಗಿ ರಾಜೇಂದ್ರ ಶ್ರೀಗಳ ಪುಣ್ಯಾರಾಧನೆ
ಲೋಕದರ್ಶನ ವರದಿ
ಶಿಗ್ಗಾವಿ 14: ತಾಲೂಕಿನ ಗಂಗಿಭಾವಿ ಸುಕ್ಷೇತ್ರದ ರಾಜಗುರು ಯೋಗಿ ರಾಜೇಂದ್ರ ಮಹಾಸ್ವಾಮಿಗಳ 5ನೇ ವರ್ಷದ ಪುಣ್ಯಾರಾಧನೆಯು ಸೆಪ್ಟಂಬರ 15ರ ಬೆಳಿಗ್ಗೆ 9 ಗಂಟೆಗೆ ಜರುಗಲಿದೆ.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಗೋಸಲ ಷ.ಬ್ರ ಚೆನ್ನಬಸವೇಶ್ವರ ಮಹಾಸ್ವಾಮಿಗಳು ಇವರ ದಿವ್ಯ ಸಾನಿದ್ಯದಲ್ಲಿ ಶ್ರೀ ರಾಜಗುರು ಯೋಗಿ ರಾಜೇಂದ್ರ ಮಹಾಸ್ವಾಮಿಗಳ ಗದ್ದುಗೆಗೆ ಪುಣ್ಯಾರಾಧನೆಯ ನಿಮಿತ್ಯ ಬೆಳಿಗ್ಗೆ 9 ಗಂಟೆಗೆ ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ, ಮಹಾ ಮಂಗಳಾರುತಿ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗುವವು.
ನಂತರ 12.30 ಕ್ಕೆ ಮಠದ ಆವರಣದಲ್ಲಿ ಪ್ರಸಾದದ ವ್ಯವಸ್ಥೆಯು ಜರುಗಲಿದ್ದು ಸುತ್ತ ಮುತ್ತಲಿನ ಗ್ರಾಮಸ್ಥರು ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಬೇಕೆಂದು ಮಠದ ಸದ್ಬಕ್ತರಾದ ಹೊಸೂರ, ಯತ್ನಳ್ಳಿ, ಅ.ಮ.ಕೋಪ್ಪ ಗ್ರಾಮಗಳ ಸದ್ಬಕ್ತರು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.