ಇಂದು ವಿಶ್ವ ವಲಸೆ ಹಕ್ಕಿಗಳ ದಿನ: ಕೇಂದ್ರದಿಂದ ಕ್ರಿಯಾ ಯೋಜನೆ ಜಾರಿ - ಜಾವ್ಡೇಕರ್
ನವದೆಹಲಿ, ಸ 10 : ಇಂದು ವಿಶ್ವ ವಲಸೆ ಹಕ್ಕಿಗಳ ದಿನ. ವಲಸೆ ಹಕ್ಕಿಗಳ ಸಂತತಿ ರಕ್ಷಿಸಲು ಕೇಂದ್ರ ಸರ್ಕಾರ ಕ್ರಿಯಾ ಯೋಜನೆ ರೂಪಿಸಿದೆ. ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಈ ಕುರಿತು ಟ್ವೀಟ್ ಮಾಡಿದ್ದು, ಅಕ್ಟೋಬರ್ ಮಾಸದ ಎರಡನೇ ಶನಿವಾರವನ್ನು ವಲಸೆ ಹಕ್ಕಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಪರಿಸರ ಸಮತೋಲನದಲ್ಲಿ ವಲಸೆ ಹಕ್ಕಿಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ.ಈ ಹಿನ್ನೆಲೆಯಲ್ಲಿ ವಲಸೆ ಹಕ್ಕಿಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ. ವಲಸೆ ಹಕ್ಕಿಗಳನ್ನು ರಕ್ಷಿಸಿದರೆ ನೀರಾವರಿ ಭೂಮಿ ಮತ್ತು ಹಕ್ಕಿಗಳ ಆವಾಸಸ್ಥಾನವನ್ನು ಸಂರಕ್ಷಿಸಿದಂತಾಗುತ್ತದೆ. ಇದರಿಂದ ಪರಿಸರ ರಕ್ಷಣೆಯಾಗಲಿದ್ದು, ನೀರಾವರಿ ಭೂಮಿಯ ಮೇಲೆ ಅವಲಂಬಿತವಾಗಿರುವವರಿಗ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.,