ಸೌಂದತ್ತಿ

ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ

ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ

ಸವದತ್ತಿ 04: ಪಟ್ಟಣದ ಕರೀಕಟ್ಟಿ ರಸ್ತೆಯಲ್ಲಿರುವ ನಿಕ್ಕಮ್ ಕಲ್ಯಾಣ ಮಂಟಪದಲ್ಲಿ ಸೆ.5ರಂದು ಮುಂಜಾನೆ 9.30ಕ್ಕೆ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಬೆಟಸೂರಮಠದ ಅಜ್ಜಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದು, ಶಾಸಕ ವಿಶ್ವಾಸ ವೈದ್ಯ ಅಧ್ಯಕ್ಷತೆವಹಿಸುವರು. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಲಿದ್ದಾರೆ. ಟಿಎಪಿಸಿಎಮ್ಎಸ್ ಅಧ್ಯಕ್ಷ ರವೀಂದ್ರ ಯಲಿಗಾರ, ಉಪಾಧ್ಯಕ್ಷ ವೀರನಗೌಡ ಸಂಗಣ್ಣವರ, ಅತಿಥಿ ಉಪನ್ಯಾಸಕರಾಗಿ ಜ್ಯೋತಿ ಕೆ.ಸಿ ಆಗಮಿಸಲಿದ್ದು, ತಹಸೀಲ್ದಾರ ಮಲ್ಲಿಕಾಜರ್ುನ ಹೆಗ್ಗನ್ನವರ, ತಾ.ಪಂ ಇಓ ಯಶವಂತಕುಮಾರ, ಬಿಇಓ ಮೋಹನ ದಂಡಿನ ಭಾಗವಹಿಸಲಿದ್ದಾರೆ 

ಸುದ್ದಿ ಓದಿ