ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ದುಷ್ಟ ಚಟಗಳಿಂದ ದೂರಿರಬೇಕು: ನಾರಾಯಣ
ಲೋಕದರ್ಶನ ವರದಿ
ರಾಣೇಬೆನ್ನೂರು 07: ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಇಂದಿನ ಪ್ರತಿಯೊಬ್ಬರು ತಮ್ಮ ದೂರದೃಷ್ಟಿಯ ಮೂಲಕ ಯಾವುದೇ ದುರಬ್ಯಾಸಗಳಿಗೆ ಬಲಿಯಾಗದೇ ಆರೋಗ್ಯಯುತ ಜೀವನವನ್ನು ರೋಪಿಸಿಕೂಳ್ಳಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು ಕೆ.ಎಲ್.ಇ. ಸಂಸ್ಥೆಯ, ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ ಹೇಳಿದರು.
ಅವರು ಕಾಲೇಜು ಭವನದಲ್ಲಿ ಮಹಿಳಾ ಕಾಲೇಜು ಎನ್.ಎಸ್.ಎಸ್ ಘಟಕವು ಆಯೋಜಿಸಿದ್ದ “ಏಡ್ಸ ನಿಯಂತ್ರಣ ಅರಿವು ಜಾಗೃತಿ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ದೇಶವು ಯುವ ಸಮುದಾಯದಿಂದ ಬಲಿಷ್ಟತೆ ಹೂಂದಿದೆ. ಯುವಕ ಯುವತಿಯರಿಂದಲೇ ಈ ದೇಶದ ಭವಿಷ್ಯದ ನಿರ್ಮಾಣ ಸಾಧ್ಯವೆಂದು ಎಲ್ಲರು ನಂಬಿದ್ದಾರೆ. ನಂಬಿಕೆಗೆ ದಕ್ಕೆ ಬಾರದ ರೀತಿಯಲ್ಲಿ ನಾವೇಲ್ಲರೂ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಭುದ್ದತೆ ಸಾದಿಸಿ ಇತರೆ ದೇಶಗಳಿಗೆ ಮಾದರಿಯಾಗುವ ರೀತಿಯಲ್ಲಿ ನಮ್ಮ ನಮ್ಮ ಕಾರ್ಯಗಳನ್ನು ಮಾಡುವುದರ ಮೂಲಕ ಭವಿಷ್ಯ ರೋಪಿಸಿಕೂಳ್ಳಲು ಮುಂದಾಗಬೇಕು ಎಂದರು. ತಾಲೂಕಾ ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ಮಾರುತಿ ಭಜಂತ್ರಿ ಅವರು ಏಡ್ಸ್ ಹೆಚ್.ಐ.ವಿ. ಅರಿವು ಜಾಗೃತಿ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಅನುರಾಧ ಎಸ್, ಅನಿಲ್ ದಂಡಗಿ ಮೋಹನ ಮಲ್ಲಾಪುರ, ಎಂ.ಆರ್ ಪಾಟೀಲ, ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸುಮಾ-ಮೇಘಾ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಎಂ.ಎನ್. ಸೂರಣಿಗಿ, ಸ್ವಾಗತಿಸಿದರು. ಶಬರಿದೇವಿ ನಿರೂಪಿಸಿ ಅನಿತಾ ವಂದಿಸಿದರು.