ಕೌಟುಂಬಿಕ ನೆಮ್ಮದಿಗೆ ಮದ್ಯಪಾನದಿಂದ ವಿಮುಕ್ತರಾಗಬೇಕು: ಆರ್ ಶಂಕರ್
ಲೋಕದರ್ಶನ ವರದಿ
ರಾಣೇಬೆನ್ನೂರು: ಸಮಾಜದಲ್ಲಿ ಮದ್ಯದ ಚಟಕ್ಕೆ ಬಲಿಯಾದವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಪರಿಣಾಮ ಶಾಂತತೆಯಿಂದಿದ್ದ ಕೌಟುಂಬಿಕ ಪರಿಸರವು ನೆಮ್ಮದಿ ಕಳೆದುಕೂಂಡು ಬದುಕು ಕಾಣದೇ ನಿತ್ಯವು ಕಣ್ಣೀರಲ್ಲಿ ಕೈತೂಳೆಯುವಂತಾಗುತ್ತಲಿದೆ. ಇದರಿಂದ ವಿಮುಕ್ತರಾಗಿ ನೆಮ್ಮದಿಯ ಬದುಕನ್ನು ಸಾಗಿಸುವಂತಾಗಿದ್ದರೆ, ಕುಡಿತದಿಂದ ವಿಮುಕ್ತರಾಗಬೇಕು ಎಂದು ಮಾಜಿ ಸಚಿವ, ಸಾಮಾಜಿಕ ಚಿಂತಕ ಆರ್ . ಶಂಕರ್ ಹೇಳಿದರು.
ಅವರು ತಾಲೂಕಿನ ಹಲಗೇರಿ ಗ್ರಾಮದ ವೀರಭದ್ರೇಶ್ವರ ಕಲ್ಯಾಣಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ, ಟ್ರಸ್ಟ್ ಮದ್ಯವ್ಯರ್ಜನಾ ವ್ಯವಸ್ಥಾಪನಾ ಸಮಿತಿಯು ಆಯೋಜಿಸಿದ್ದ 1486ನೇ ಮದ್ಯವ್ಯರ್ಜನಾ ಶಿಭಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೂಂಡು ಮಾತನಾಡಿದರು. ಡಾಽಽ ವಿರೇಂದ್ರ ಹೆಗ್ಗಡೆಜೀ ಅವರು ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವ ನಿಟ್ಟಿನಲ್ಲಿ ತಮ್ಮ ದೂರದೃಷ್ಟಿಯಿಂದಾಗಿ ಇಂತಹ ಶಿಭಿರಗಳ ಮೂಲಕ ಮದ್ಯವ್ಯಸನಿಗಳನ್ನು ವಿಮುಕ್ತಗೂಳಿಸಿ ಅವರ ಕುಟುಂಬ ಸದಾಕಾಲ ನೆಮ್ಮದಿಯಿಂದ ಬದುಕಬೇಕು, ಭಾವೈಕ್ಯತೆ ಸಾಧಿಸಬೇಕು ಎನ್ನುವ ವಿಚಾರ ಅವರು ಹೂಂದಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸ ಶ್ರೀಕ್ಷೇತ್ರ ಮಾಡುವುದರ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ದಿವ್ಯ ಸಾನಿದ್ಯ ವಹಿಸಿದ್ದ ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದ ವೀರಭದ್ರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಜೀವನ ಜಂಜಾಟದಲ್ಲಿ ಸಿಲುಕಿರುವ ಬಹುತೇಕ ಮಾನವ ಜೀವಿಯು ಕುಡಿತಕ್ಕೆ ಬಲಿಯಾಗುತ್ತಿರುವುದು ಎಲ್ಲಡೆಯು ಕಂಡು ಬರುತ್ತಿದೆ. ಕುಡಿತ ಅನಿವಾರ್ಯವಲ್ಲ ಬದಲಾಗಿ ಕೆಲಸ ಮತ್ತು ನೆಮ್ಮದಿ ಅನಿವಾರ್ಯ. ನೆಮ್ಮದಿಯ ಬದುಕು ನಮ್ಮದಾಗಬೇಕಾದರೆ ವ್ಯಸನದಿಂದ ದೂರವಿರಬೇಕು ಎಂದು ತಮ್ಮ ಸಂದೇಶಾಂಮೃತ ನೀಡಿದರು.
ಶಾಸಕ ಅರುಣಕುಮಾರ ಪೂಜಾರ ಅವರು ಸಮಾಜ ಪರಿವರ್ತನೆಯ ಕಾರ್ಯವು ಧರ್ಮಸ್ಥಳ ಸಂಸ್ಥೆಯಿಂದ ನಡೆಯುತ್ತಿದ್ದು, ಈ ಸೇವಾ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ. ತಾವು ಕಂಡಂತೆ ತಾಲೂಕಿನಲ್ಲಿ ಇಂತಹ ಹತ್ತಾರು ಶಿಭಿರಗಳು ನಡೆದಿವೆ. ಅದರಲ್ಲಿ ಪಾಲ್ಗೂಂಡ ಸಾವಿರಾರು ಮದ್ಯವ್ಯಸನಿಗಳು ವಿಮುಕ್ತರಾಗಿ ಇಂದು ನೆಮ್ಮದಿಯ ಬದುಕನ್ನು ಕಟ್ಟಿಕೂಂಡಿದ್ದಾರೆ. ಅಲ್ಲದೇ ಅವರಿಂದ ಸಮಾಜದಲ್ಲಿ ಮದ್ಯ ಸೇವೆ ಮಾಡುವವರಿಗೆ ಪರಿವರ್ತನೆಯ ಕಾರ್ಯ ನಡೆಯುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿಯಾಗಿದೆ ಎಂದರು. ಪ್ರಾಸ್ತಾವಿಕವಾಗಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಅವರು ಶಿಬಿರದ ಉದ್ದೇಶ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಡಾ. ಬಸವರಾಜ ಕೇಲಗಾರ, ಗ್ರಾಮಪಂಚಾಯತಿ ಅಧ್ಯಕ್ಷರು, ಪದಾದಿಕಾರಿಗಳು ವ್ಯವಸ್ಥಾನ ಸಮಿತಿಯ ಸದಸ್ಯರು ಮತ್ತಿತರ ಗಣ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಯೋಜನಾಧಿಕಾರಿ ನಾಗೇಶ್ ಸ್ವಾಗತಿಸಿ, ಸತೀಶ್ ನಿರೂಪಿಸಿ, ರವಿಕುಮಾರ ವಂದಿಸಿದರು.