ಮನರಂಜನೆ

‘ಮದಗಜ’ ಟೈಟಲ್ ಸಾಂಗ್ ರಿಲೀಸ್

‘ಮದಗಜ’ ಟೈಟಲ್ ಸಾಂಗ್ ರಿಲೀಸ್

ಬೆಂಗಳೂರು, ನ. 11: ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್​ ನಟನೆಯ ‘ಮದಗಜ’ ಸಿನಿಮಾ ಹಾಡುಗಳ ಮೂಲಕ ‘ಭಾರಿ ಸೌಂಡು ಮಾಡುತ್ತಿದೆ. ಈಗ ಚಿತ್ರದ ಟೈಟಲ್​ ಸಾಂಗ್​ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ನಟ ಶ್ರೀಮುರಳಿ ಅಬ್ಬರಿಸಿದ್ದಾರೆ. ಆನಂದ್​ ಆಡಿಯೋ ಮೂಲಕ ‘ಮದಗಜ’ ಟೈಟಲ್​ ಸಾಂಗ್​ ರಿಲೀಸ್​ ಆಗಿದ್ದು ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. 

‘ಅಯೋಗ್ಯ’ ಖ್ಯಾತಿಯ ಮಹೇಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಶ್ರೀನಿವಾಸ್​ ಗೌಡ ಬಂಡವಾಳ ಹೂಡಿದ್ದಾರೆ. 

ಚಿತ್ರದ ಕುರಿತು ಮಾತನಾಡಿದ ಶ್ರೀಮುರಳಿ, ಕೋಪ, ದ್ವೇಷ, ಸೇಡು, ಅಸೂಯೆಗಳಿಗೂ ಅಂತ್ಯವಿದೆ.   ಇಂತಹ ಗುಣಗಳ ಬಗ್ಗೆ ಒಂದಲ್ಲ ಒಂದು ದಿನ ಬೋರ್ ಆಗುತ್ತದೆ.  ಆದಾಗ್ಯೂ ದುರ್ಗುಣಗಳಿಂದ ಹೊರಬರಲು ತಾಳ್ಮೆ ಅಗತ್ಯ ಎಂದಿದ್ದಾರೆ.

ಶ್ರೀಮುರಳಿ, ಆಶಿಕಾ ರಂಗನಾಥ್​ ಜೊತೆಗೆ ಖ್ಯಾತ ನಟ ಜಗಪತಿ ಬಾಬು ಅವರು ಬಣ್ಣ ಹಚ್ಚಿದ್ದಾರೆ. ಸಿನಿಮಾದ ಪ್ರತಿ ಫ್ರೇಮ್​ ಕೂಡ ಅದ್ದೂರಿಯಾಗಿ ಮೂಡಿಬರುತ್ತಿದೆ ಎಂಬುದನ್ನು ಟೀಸರ್ ಮತ್ತು ಹಾಡುಗಳೇ ತೋರಿಸಿವೆ.

ಬೃಹತ್​ ಸೆಟ್​ಗಳು ಮತ್ತು ಅದ್ದೂರಿ ಮೇಕಿಂಗ್​ನಿಂದಾಗಿ ಟೈಟಲ್ ಸಾಂಗ್ ಗಮನ ಸೆಳೆಯುತ್ತಿದ್ದು, ಸಂತೋಷ್​ ವೆಂಕಿ ಹಿನ್ನೆಲೆ ಗಾಯನವಿದೆ. ನವೀನ್​ ಕುಮಾರ್​ ಛಾಯಾಗ್ರಹಣ, ಹರೀಶ್​ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ‘ಮದಗಜ’ ಬಿಡುಗಡೆ ಆಗಲಿದೆ.  ಕನ್ನಡದಲ್ಲಿ ಡಿಸೆಂಬರ್ 3ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. 

ಸುದ್ದಿ ಓದಿ