ಆರ್.ಟಿ.ಇ.ಎಸ್ ಕಾಲೇಜಿನಲ್ಲಿ ಸಕಾಲ ಯೋಜನೆ ಕಾರ್ಯಕ್ರಮ
ರಾಣೇಬೆನ್ನೂರು: ಇಲ್ಲಿನ ಹೊರ ವಲಯದ ಆರ್.ಟಿ.ಈ.ಎಸ್. ಮಹಾವಿದ್ಯಾಲಯದಲ್ಲಿ ಸರಕಾರದ ಸಕಾಲ ಯೋಜನೆ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಹಯೋಗ ನೀಡಿತ್ತು.
ಪ್ರಾಚಾರ್ಯ ಎಫ್.ಹೆಚ್.ಮಾಚೇನಹಳ್ಳಿ ಅಧ್ಯಕ್ಷತೆ ವಹಿಸಿದ್ದ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಪ್ರೊ.ಹೆಚ್.ಜಿ. ಬಸವರಾಜ ಅವರು ಸಕಾಲ ಯೋಜನೆ ಕುರಿತು ಸಮಗ್ರ ಮಾಹಿತಿ ನೀಡಿದರು. ವೇದಿಕೆಯಲ್ಲಿ ಎನ್.ಎಸ್.ಎಸ್. ಯೋಜನಾಧಿಕಾರಿ ಡಾಽಽ ಸರಸ್ವತಿ ಬಮ್ಮನಾಳ, ಐಕ್ಯೂಎಸಿ ಸಂಯೋಜಕ ಡಾ.ಮಧುಕುಮಾರ.ಆರ್., ಪ್ರೊ. ರಮೇಶ ಎನ್.ಜಿ ಸೇರಿದಂತೆ ಮತ್ತಿತರೆ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.