ರಾಷ್ಟ್ರೀಯ

ಹುಲಿ ಸಂರಕ್ಷಣೆ ಆತ್ಮ ನಿರ್ಭರತೆಗೆ ಪ್ರಧಾನ ಉದಾಹರಣೆ: ಜಾವಡೇಕರ್

ಹುಲಿ ಸಂರಕ್ಷಣೆ ಆತ್ಮ ನಿರ್ಭರತೆಗೆ ಪ್ರಧಾನ ಉದಾಹರಣೆ: ಜಾವಡೇಕರ್

 ನವದೆಹಲಿ, ಜುಲೈ 29: ಅಂತರರಾಷ್ಟ್ರೀಯ ಹುಲಿ ದಿನಾಚರಣೆಯಂದು ದೇಶದ ಅರಣ್ಯ ಸಿಬ್ಬಂದಿಗೆ ವಂದನೆ ಸಲ್ಲಿಸಿರುವ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್, ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿರುವ ಆತ್ಮ ನಿರ್ಭರತೆಗೆ ಹುಲಿ ಸಂರಕ್ಷಣೆಯು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.

 “ಜಾಗತಿಕ ಹುಲಿ ದಿನದಂದು, ನಮ್ಮ ಮುಂಚೂಣಿಯ ಅರಣ್ಯ ಸಿಬ್ಬಂದಿಗೆ ನಾನು ನಮಸ್ಕರಿಸುತ್ತೇನೆ, ಅವರ ಪರಿಶ್ರಮವು ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಚೇತರಿಕೆಯಾಗಿದ್ದು, ಭರವಸೆಯ ಹಾದಿಯಲ್ಲಿ ಸಾಗುವಂತೆ ಮಾಡಿದೆ” ಎಂದು ಟ್ವೀಟ್ ಮಾಡಿದ್ದಾರೆ. 

  "ಹುಲಿ ಸಂರಕ್ಷಣಾ ಯೋಜನೆಯನ್ನು 1973 ರಲ್ಲಿ ಕೇವಲ ಒಂಬತ್ತು ಹುಲಿ ಮೀಸಲು ಪ್ರದೇಶದೊಡನೆ ಪ್ರಾರಂಭಿಸಲಾಯಿತು. ಇಂದು ಭಾರತದಲ್ಲಿ 2967 ಹುಲಿಗಳನ್ನು ಹೊಂದಿರುವ 50 ಮೀಸಲು ಅರಣ್ಯಗಳಿವೆ. ಹುಲಿ ಆಹಾರ ಸರಪಳಿಯ ಉತ್ತುಂಗದಲ್ಲಿದ್ದು,  ದೃಢವಾದ ಜೈವಿಕ ವೈವಿಧ್ಯತೆಗೆ ಸಾಕ್ಷಿಯಾಗಿದೆ, '' ಎಂದಿದ್ದಾರೆ. 

 ಸಚಿವ ಪ್ರಕಾಶ್ ಜಾವಡೇಕರ್ ಅವರು ಟೈಗರ್ಸ್ ವರದಿ 2018 ರ ವಿವರವಾದ ಅಂಕ ಅಂಶಗಳನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ.

 ಜಾಗತಿಕ ಹುಲಿ ದಿನಾಚರಣೆಯ ಮುನ್ನಾದಿನದಂದು ಬಿಡುಗಡೆಯಾದ ವರದಿಯ ಪ್ರಕಾರ, ಹುಲಿಗಳು ಭಾರತದಲ್ಲಿ 2006 ರಿಂದ 2018 ರವರೆಗೆ ವಾರ್ಷಿಕ ಆರು ಶೇಕಡಾ ದರದಲ್ಲಿ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ವಿಶ್ವದ ಎಪ್ಪತ್ತು ಪ್ರತಿಶತದಷ್ಟು ಹುಲಿಗಳು ಭಾರತದಲ್ಲಿದ್ದು, ಸಂರಕ್ಷಣಾ ಪ್ರಯತ್ನವು ಭಾರಿ ಯಶಸ್ಸನ್ನು ಕಂಡಿದೆ… ಹುಲಿ ಸಂರಕ್ಷಣೆ, ಸಾಮರ್ಥ್ಯ ವೃದ್ಧಿ ಮತ್ತು ತರಬೇತಿಯಲ್ಲಿ ಹುಲಿ ಶ್ರೇಣಿಗಳನ್ನು ಹೊಂದಿರುವ ಇತರ 13 ದೇಶಗಳಿಗೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ, '' ಎಂದು ಸಚಿವರು ಹೇಳಿದ್ದಾರೆ.

 ರಾಷ್ಟ್ರೀಯ ಪ್ರಾಣಿಗಳ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಜನರಲ್ಲಿ ಮನವಿ ಮಾಡಿದ್ದಾರೆ. 

 ಆಧುನೀಕರಣ ಮತ್ತು ಸಂರಕ್ಷಣೆಯ ನಡುವಿನ ಸಮತೋಲನದೊಡನೆ ನಮ್ಮ ರಾಷ್ಟ್ರೀಯ ಮತ್ತು ಸಾಂಸ್ಕೃತಿಯ ಪರಂಪರೆಯ ಅಡಿಯಲ್ಲಿ ಹುಲಿಗಳನ್ನು ಉಳಿಸುವ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ.  ಅಂತರರಾಷ್ಟ್ರೀಯ ಹುಲಿ ದಿನದಂದು, ನಮ್ಮ ರಾಷ್ಟ್ರೀಯ ಪ್ರಾಣಿಗಳ ಸಂರಕ್ಷಣೆಗಾಗಿ ಜಾಗೃತಿ ಮೂಡಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ" ಎಂದು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ