ರಾಷ್ಟ್ರೀಯ

ಗಡಿಯಲ್ಲಿ ಪಾಕ್ ದಾಳಿಗೆ ಮೂವರು ಯೋಧರು ಹುತಾತ್ಮ

ಗಡಿಯಲ್ಲಿ  ಪಾಕ್ ದಾಳಿಗೆ  ಮೂವರು ಯೋಧರು ಹುತಾತ್ಮ

ಶ್ರೀನಗರ , ಅಕ್ಟೋಬರ್ 3:  ಜಮ್ಮು-ಕಾಶ್ಮೀರ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ನಡೆಸಿದ  ದಾಳಿಯಲ್ಲಿ  ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. 

ಕುಪ್ವಾರದಲ್ಲಿ ಅ.1ರಂದು ನಡೆದ ಗುಂಡಿನ ದಾಳಿ ವೇಳೆ ಗಾಯಗೊಂಡಿದ್ದ ಹವಾಲ್ದಾರ್ ಕುಲ್ದೀಪ್ ಸಿಂಗ್ ಮತ್ತು ರೈಫಲ್ಮ್ಯಾನ್ ಶುಭಂ ಶರ್ಮಾ ಹುತಾತ್ಮರಾಗಿದ್ದಾರೆ. ಪೂಂಛ್ ಜಿಲ್ಲೆಯ ಕೃಷ್ಣಾ ಘಾಟಿ ವಲಯದಲ್ಲಿನ  ಗುಂಡಿನ ದಾಳಿಯಲ್ಲಿ ಲ್ಯಾನ್ಸ್ ನಾಯಕ್ ಕರ್ನಲ್ ಸಿಂಗ್ ಹುತಾತ್ಮರಾಗಿದ್ದಾರೆ ಎಂದು ಮೂಲಗಳು ಹೇಳಿವೆ .

ಪಂಜಾಬ್ ಮೂಲದ ಹುತಾತ್ಮ ಲ್ಯಾನ್ಸ್ ನಾಯಕ್ ಕರ್ನಲ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್ ಸರ್ಕಾರ 50 ಲಕ್ಷ ರೂಪಾಯಿ ಪರಿಹಾರ  ಹಾಗೂ ಕುಟುಂಬದ ಒಬ್ಬ   ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆ. 

ಸುದ್ದಿ ಓದಿ