ಬೈಲಹೊಂಗಲ

ಹಳೆಯ ವಿದ್ಯಾರ್ಥಿಗಳಿಂದ ಶಾಲೆಯ ಉನ್ನತಿ ಬಗ್ಗೆ ಚಿಂತನೆ

ಹಳೆಯ ವಿದ್ಯಾರ್ಥಿಗಳಿಂದ ಶಾಲೆಯ ಉನ್ನತಿ ಬಗ್ಗೆ ಚಿಂತನೆ

ಬೈಲಹೊಂಗಲ 19 : ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮತ್ತು ಕಿತ್ತೂರ ಚನ್ನಮ್ಮ ಬಾಲಕಿಯರ ಪ್ರೌಢಶಾಲೆಯ 2003-04ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಹಳೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶಾಲೆಯ ಉನ್ನತಿ ಬಗ್ಗೆ ಚಿಂತನೆ ನಡೆಸಿದರು.  

ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಶಾಲೆಗೆ ಭೇಟಿ ನೀಡಿ ತಾವು ಕಲಿತ ಬೆಂಚ್‌ಗಳ ಮೇಲೆ ಕುಳಿತು ಶಿಕ್ಷಕರಿಂದ ಪಾಠ ಆಲಿಸಿದರು. ಏಳುಬೀಳುಗಳ ನಡುವೆ ಸಾರ್ಥಕತೆಯ ಜೀವನ ನಡೆಸುವುದನ್ನು ಕಲಿಸಿಕೊಟ್ಟ ಶಾಲೆಯನ್ನು, ಗುರುವೃಂದವನ್ನು ಅಭಿನಂದಿಸಿದರು.  

ನಿವೃತ್ತ ಹಿರಿಯ ಶಿಕ್ಷಕ ರಮೇಶ ಪಾರಿಶ್ವಾಡ ಮಾತನಾಡಿ, ಕೇಂದ್ರ ಸಚಿವರು, ಸಂಸದರು, ಶಾಸಕರು, ವಿಜ್ಞಾನಿಗಳು, ನೂರಾರು ವೈದ್ಯರು, ಇಂಜನಿಯರ್‌ರು, ಯೋಧರನ್ನು ಶಾಲೆ ನೀಡಿದೆ. ಶಾಲೆಯಲ್ಲಿ ಕಲಿತ ಸಾವಿರಾರು ಜನರು ವಿದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಕಂಪನಿಗಳನ್ನು ನಡೆಸುತ್ತಿದ್ದಾರೆ. ಅವರೆಲ್ಲರೂ ಒಂದೆಡೆ ಸೇರಿ ಶಾಲೆಗೆ ವಿಶೇಷ ಕೊಡುಗೆ ನೀಡಬೇಕೆಂದರು. ಶಾಲೆಗಳು ನಡೆದು ಬಂದ ದಾರಿ ವಿವರಿಸಿದರು.  

ನಿವೃತ್ತ ಶಿಕ್ಷಕರಾದ ಎಂ.ಎಸ್‌.ಮಾಳಿ, ಎಂ.ವೈ.ಆನಿಕಿವಿ, ಬಿ.ಬಿ.ನರಸಣ್ಣವರ, ಎನ್‌.ಎಂ.ಕುಲಕರ್ಣಿ, ಎನ್‌.ಐ.ಬಡಿಗೇರ, ರಾಜು ಹೊಂಗಲಮಠ, ಎಸ್‌.ಬಿ.ಬೋರಕನವರ, ಕೆ.ಎಂ.ಸಂಗೊಳ್ಳಿ, ಎಸ್‌.ಎಸ್‌.ಬಳಿಗಾರ, ಉಳವಪ್ಪ ತುರಮರಿ, ಎಂ.ವಿ.ನಾಗನೂರ, ಬಿ.ವೈ.ಭರಮಣ್ಣವರ, ಬಿ.ಟಿ.ಗುರಕ್ಕನವರ, ಎ.ಎಂ.ಕರ್ಕಿ, ವಿಠ್ಠಲ ಹೊಸೂರ, ದಿನೇಶ ಮಿರಜಕರ, ಎಂ.ಎ.ಆಲೂರ, ಹೆಚ್‌.ಟಿ.ಭಜಂತ್ರಿ, ಮುಖ್ಯಾಧ್ಯಾಪಕ ಎಂ.ಸಿ.ಹಂಗರಕಿ, ದೈಹಿಕ ಶಿಕ್ಷಕ ಉಡಿಕೇರಿ ಸೇರಿದಂತೆ ಅನೇಕ ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು. 

ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಗಲಿದ ಶಿಕ್ಷಕರಿಗೆ ಹಾಗೂ ಗೆಳೆಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.   

ಹಳೇ ವಿದ್ಯಾರ್ಥಿಗಳಾದ ಸುಭಾಸ ಪಾಟೀಲ, ಆನಂದ ಕಾಜಗಾರ, ನವೀನ ಮೂಗಿ, ಸಂತೋಷ ಪಾಟೀಲ, ಮಲ್ಲೇಶ ಮತ್ತಿಕೊಪ್ಪ, ನಾಗರಾಜ ಇಂಗಳಗಿ, ಶಿವಲೀಲಾ ತುರಮರಿ, ಅಶ್ವಿನಿ ಹರಣಿ, ಪ್ರೀತಿ ಲಿಂಬೆನವರ, ಮಂಜುನಾಥ ಶಿಂತ್ರಿ, ರಮೇಶ ಮೂಗಬಸವ, ನಾಗರಾಜ ಬಾಗೇವಾಡಿ, ಅದೃಶ್ಯ ಗಾಣಿಗೇರ, ಮಹಾಂತೇಶ ಕುಸಲಾಪೂರ, ರುದ್ರ​‍್ಪ ಹುಲಮನಿ, ರಮೇಶ ಲೋಕಾಪೂರ, ಸುದರ್ಶನ ಗೋಡಕೆ, ಸಂತೋಷ ಆನಿಗೋಳ, ಸಂತೋಷ ಹೊಂಗಲ, ಕಾವ್ಯಾ ಪಾಟೀಲ, ಅಶ್ವಿನಿ ಪಾಟೀಲ, ಶಿಲ್ಪಾ ನಂದೆಣ್ಣವರ, ಚಂಬಯ್ಯ ಕಂಬಿ, ಪ್ರಕಾಶ ಬಡನ್ನವರ, ನಿಂಗನಗೌಡ ಕಡಬಿ, ಸುಧೀರ ಕೊಯಿಮತ್ತೂರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.  


ಸುದ್ದಿ ಓದಿ