ಸಾಲ ಪಡೆದವರು ಸಕಾಲಕ್ಕೆ ಪಾವತಿಸಬೇಕು: ಶಿವಯೋಗಿ ಶ್ರೀಗಳು.
ಲೋಕದರ್ಶನ ವರದಿ
ರಾಣೇಬೆನ್ನೂರು 15: ಯಾವುದೇ ಬ್ಯಾಂಕು, ಹಣಕಾಸು ಸಂಸ್ಥೆಗಳು ವ್ಯವಹಾರಿಕವಾಗಿ ಪ್ರಗತಿ ಕಾಣಬೇಕಾದರೆ ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿ ಮಾಡಿದಾಗ ಮಾತ್ರ ಸಂಪೂರ್ಣ ಅಭಿವೃದ್ದಿ ಸಾಧಿಸಲು ಸಾಧ್ಯವಾಗುವುದು ಎಂದು ನಗರ ಹೂರ ವಲಯ ಶನ್ಯೆಶ್ಚರ ಮಂದಿರದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾ ಸ್ವಾಮಿಗಳು ನುಡಿದರು.
ಅವರು ಇಲ್ಲಿನ ಪಿ.ಬಿ. ರಸ್ತೆಯ ಪಂಪಾಪತಿ ಕಟ್ಟಡದಲ್ಲಿರುವ ಮ್ಯಾಕ್ಸ್ ವ್ಯಾಲ್ಯುವ್ ಕ್ರೇಡಿಟ್ಸ್ ಮತ್ತು ಇನ್ವೆಷ್ಟಮೇಂಟ್ ಲಿಮಿಟೇಡ್ ಕಂಪನಿಯ ದ್ವೀತಿಯ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು. ಬಡವರಿಗೆ ಮಧ್ಯಮ ವರ್ಗ, ಶ್ರೀಮಂತ ಜನರಿಗೆ ಅನುಕೂಲಕ್ಕಾಗಿ ಇಂದು ಸಾವಿರಾರು ಬ್ಯಾಂಕುಗಳು ಸಾಲದ ಮೂಲಕ ಅವರಿಗೆ ನೆರವಾಗುತ್ತಿವೆ. ಅಂತಹ ಬ್ಯಾಂಕುಗಳು ಸಾಕಷ್ಟು ಪ್ರಗತಿ ಸಾದಿಸಬೇಕಾದರೆ ನಮ್ಮ ವ್ಯವಹಾರ ಸರಿಯಾಗಿ ಇರಬೇಕು ಸಾಲ ಪಡೆದು ಅದನ್ನು ದುಡಿಸಿ ವಾಪಾಸು ನೀಡುವಂತಹ ಮನೋಭಾವನೆ ಬರಬೇಕು ಎಂದು ಅವರು ಗ್ರಾಹಕರಿಗೆ ಕರೆ ನೀಡಿದರು.
ಸಂಸ್ಥೆ ಹಾಗೂ ಕಂಪನಿಗಳನ್ನು ಯಾರಾದರೂ ಹುಟ್ಟು ಹಾಕಬಹುದು ಆದರೇ ಅವುಗಳನ್ನು ನಡೆಸಿಕೂಂಡು ಹೊಗುವುದು ಮುಖ್ಯ ಅಂತಹ ಒಂದು ಲಿಮಿಟೇಡ್ ಕಂಪನಿಯು ಅತ್ಯುತ್ತಮವಾಗಿ ವಾಣಿಜ್ಯ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದ ಶ್ರೀಗಳು ಹಂತ ಹಂತವಾಗಿ ಈ ಕಂಪನಿಯು ಮತ್ತಷ್ಟು ಪ್ರಗತಿ ಸಾದಿಸುವ ನಿಟ್ಟಿನಲ್ಲಿ ತನ್ನ ಕರ್ತವ್ಯ ನಿರ್ವಹಿಸಬೇಕೆನ್ನುವ ಸದಾಶಯ ತಮ್ಮದಾಗಿದೆ ಎಂದರು.
ವೇದಿಕೆಯಲ್ಲಿ ಶಾಖಾ ವ್ಯವಸ್ಥಾಪಕ ಚಂದ್ರಶೇಖರಯ್ಯ ಕುಂದಗೋಳಮಠ, ಸಂತೋಷ ಚೌಡಪ್ಪಳವರ, ಮಾರುತಿ ಲಚ್ಚಣ್ಣನವರ, ಬಸವರಾಜ ಹಿರೇಮಠ, ಕರವೆ ಜಿಲ್ಲಾಧ್ಯಕ್ಷ ಭೀಮಪ್ಪ ಗೋಣಿಬಸಮ್ಮನವರ, ಗುರುರಾಜ ಗೋಜನೂರ, ಅಲಿಂ ಖಾನ್, ಯೋಗರಾಜ ನಾಯ್ಡು ಸೇರಿದಂತೆ ಶಾಖೆಯ ಸಿಬ್ಬಂದಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು.