ನೋಟರಿ ಸಂಘದ ಅಧ್ಯಕ್ಷರಾಗಿ ತೊಗರ್ಸಿ ಅವಿರೋಧ ಆಯ್ಕೆ
ರಾಣೇಬೆನ್ನೂರ 05: ಹಾವೇರಿ ಜಿಲ್ಲೆಯ ನೋಟರಿ ಸಂಘದ ಕಾರ್ಯಾಲಯದಲ್ಲಿ ಇತ್ತೀಚೆಗೆ ಜಿಲ್ಲಾ ಸಂಘದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಸುದೀರ್ಘವಾಗಿ ನಡೆದ ಅಧ್ಯಕ್ಷರ ಆಯ್ಕೆಯ ಸಭೆಯಲ್ಲಿ ರಾಣೇಬೆನ್ನೂರಿನ ವಕೀಲರ ಸಂಘದ ಸದಸ್ಯ ಹಾಗೂ ನೋಟರಿ ಎಸ್.ವಿ.ತೊಗರ್ಸಿ ಅವರನ್ನು ಅವಿರೋಧವಾಗ ಆಯ್ಕೆ ಮಾಡಲಾಯಿತು.
ರಾಜ್ಯ ನೋಟರಿ ಸಂಘದ ಗೌರವಾಧ್ಯಕ್ಷ ಎಂ.ಸಿ.ನಡುವಿನಮಠ, ಕಾರ್ಯದರ್ಶಿ ಜಿ.ಕೆ.ಕಮ್ಮಾರ, ಹಿರಿಯ ನೋಟರಿಗಳಾದ ಆರ್.ಬಿ.ಸೊರಟೂರ, ಏಕಾಂತ ಮುದಿಗೌಡ್ರ, ಕುಮಾರ ಮಡಿವಾಳರ, ಈಶ್ವರಚಂದ್ರ ಕುಳೇನೂರ, ಎಸ್.ಬಿ.ದಿಂಡದಹಳ್ಳಿ, ಹಿರೇಕೆರೂರಿನ ಎಚ್.ಎಸ್.ಕೋಣನವರ, ಹಾನಗಲ್ಲನ ಎನ್.ಎಂ.ದೊಡ್ಮನಿ, ಬ್ಯಾಡಗಿಯ ಬೆಳಕೇರಿಮಠ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಎಸ್.ಪಾಟೀಲ, ಬಿ.ಎಂ.ಗೌರಾಪುರ, ಡಾ.ಸರೋಜಾ ಹುಲಿಹಳ್ಳಿ, ಎಸ್.ಎಂ.ಗಾಣಿಗೇರ, ಸುರೇಶ್ ದ್ಯಾವಕ್ಕನವರ, ಶೇಷಗಿರಿ, ಕೊಪ್ಪದ, ಹಿತ್ತಲಮನಿ, ಎನ್.ಬಿ.ಸುಂಕದ, ಎಂ.ಎಲ್.ಸೊನ್ನದ, ಕೆ.ಡಿ.ಪಾಟೀಲ, ಎಂ.ವಾಯ್.ಕೊಪ್ಪರಸಿಕೊಪ್ಪ, ಎನ್.ಎಸ್.ದೊಡ್ಮನಿ ಮತ್ತಿತರ ನೋಟರಿಗಳು, ಸಂಘಟನೆಯ ಮುಖಂಡರು, ವಕೀಲರು ಪಾಲ್ಗೊಂಡಿದ್ದರು.
ಜಿಲ್ಲೆಯ ನೂತನ ನೋಟರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ವಿ.ತೊಗರ್ಸಿ ಅವರು ಗಣ್ಯರಿಂದ ಪ್ರಮಾಣ ವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ರಾಣೇಬೆನ್ನೂರ, ಹಿರೇಕೆರೂರ, ರಟ್ಟಿಹಳ್ಳಿ, ಬ್ಯಾಡಗಿ, ಹಾನಗಲ್ಲ, ಸವಣೂರ, ಶಿಗ್ಗಾವಿ, ಹಾವೇರಿ, ಸಂಘದ ಗಣ್ಯರು, ವಕೀಲರು ಅಭಿನಂದಿಸಿ ಗೌರವಿಸಿ ಸನ್ಮಾನಿಸಿದರು.