ಈ ಬಾರಿಯ ದೀಪಾವಳಿಯಲ್ಲಿ .. ಗೋವಿನ ಸಗಣಿಯ ಹಣತೆ ಬಳಸಲು ಉತ್ತೇಜನ....!
ನವದೆಹಲಿ, ಅ 13; ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾಮಧೇನು ದೀಪಾವಳಿ ಅಭಿಯಾನ ನಡೆಸಲು ರಾಷ್ಟ್ರೀಯ ಕಾಮಧೇನು ಆಯೋಗ (ಆರ್ಕೆಎ) ದೇಶಾದ್ಯಂತ ಅಭಿಯಾನ ಆರಂಭಿಸಿದೆ. ಆಯೋಗ, ಈ ಅಭಿಯಾನದ ಮೂಲಕ ದೀಪಾವಳಿ ಉತ್ಸವದಲ್ಲಿ ಹಸುವಿನ ಸಗಣಿ ಹಾಗೂ ಅದರ ಉತ್ಪನ್ನಗಳ ವ್ಯಾಪಕ ಬಳಕೆಯನ್ನು ಉತ್ತೇಜಿಸಲಿದೆ. ದೀಪಾವಳಿ ಹಬ್ಬಕ್ಕಾಗಿ ಹಸುವಿನ ಸಗಣಿಯಿಂದ ತಯಾರಿಸಿದ ಹಣತೆಗಳು ಮೇಣದ ಬತ್ತಿಗಳು, ಧೂಪ್, ಸ್ವಸ್ತಿಕ್, ವಾಲ್-ಪೀಸ್, ಹವನ ಸಾಮಾಗ್ರಿ, ಗಣೇಶ ಹಾಗೂ ಲಕ್ಷ್ಮಿ ದೇವರ ವಿಗ್ರಹಗಳ ತಯಾರಿಕೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಗೋವುಗಳ ಸಗಣಿಯಿಂದ ತಯಾರಿಸಿದ 33 ಕೋಟಿ ಹಣತೆಗಳನ್ನು ಹಚ್ಚಬೇಕು ಆ ಮೂಲಕ 11 ಕೋಟಿ ಕುಟುಂಬಗಳನ್ನು ತಲುಪಬೇಕೆಂಬ ಗುರಿ ಇರಿಸಿಕೊಂಡಿದೆ.
ಜನರಿಗೆ ಅಭಿಯಾನಕ್ಕೆ ಉತ್ತೇಜನಕಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪವಿತ್ರ ನಗರ ಅಯೋಧ್ಯೆಯಲ್ಲಿ ಸುಮಾರು ಮೂರು ಲಕ್ಷ ದೀಪಗಳನ್ನು ಬೆಳಗಲಾಗುವುದು ಪವಿತ್ರ ನಗರಿ ವಾರಣಾಸಿಯಲ್ಲಿ ಒಂದು ಲಕ್ಷ ಹಣತೆ ಹಚ್ಚಲಾಗುವುದು. ಸಾವಿರಾರು ಗೋವು ಆಧಾರಿತ ಉದ್ಯಮಿಗಳಿಗೆ ವ್ಯಾಪಾರ ಅವಕಾಶ ಸೃಷ್ಟಿಸುವುದರ ಜೊತೆಗೆ ಹಸುವಿನ ಸಗಣಿ ಉತ್ಪನ್ನಗಳ ಬಳಕೆ ಸ್ವಚ್ಛ ಹಾಗೂ ಆರೋಗ್ಯಕರ ಪರಿಸರಕ್ಕೆ ಕಾರಣವಾಗುತ್ತೆ. ಅಲ್ಲದೆ ಗೋ ಶಾಲೆಗಳನ್ನು ಸ್ವಾವಲಂಬಿಯಾಗಿಸಲು ನೆರವಾಗಲಿದೆ.
ಚೀನಾದ ನಿರ್ಮಿತ ದೀಪಗಳಿಗೆ ಪರಿಸರ ಸ್ನೇಹಿ ಪರ್ಯಾಯ ಒದಗಿಸುವ ಮೂಲಕ, ಈ ಅಭಿಯಾನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾರತದಲ್ಲೇ ತಯಾರಿಸಿ ಉಪ ಕ್ರಮದ ಮೇಲೆ ದೃಷ್ಟಿ ಹರಿಸಿದೆ ಎಂದು ತಿಳಿಸಿದೆ. ಒಟ್ಟಾರೆ ಪರಿಸರ ಹಾನಿಯನ್ನು ತಗ್ಗಿಸಿ ಸ್ವದೇಶಿ ಚಳವಳಿಯನ್ನು ಉತ್ತೇಜಿಸಲಿದೆ.ರಾಷ್ಟ್ರೀಯ ಕಾಮಧೇನು ಆಯೋಗ ಪ್ರಧಾನ ಮಂತ್ರಿ ಮೋದಿ ಅವರ ಮನವಿಯಂತರ ಈ ವರ್ಷದ ಗಣೇಶ ಉತ್ಸವಕ್ಕಾಗಿ ವಿನಾಯಕ ಮೂರ್ತಿಗಳ ತಯಾರಿಕೆಯಲ್ಲಿ ಪರಿಸರ ಸ್ನೇಹಿ ವಸ್ತುಗಳ ಬಳಸುವಂತೆ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿತ್ತು.