ಜನಪರ ಕಾರ್ಯಕ್ರಮಗಳು ನನಗೆ ತೃಪ್ತಿ ತಂದಿವೆ: ಬ್ಯಾಳಿ
ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆದಿರುವ ಅನೇಕ ಜನಪರ ಕಾರ್ಯಕ್ರಮಗಳು ನನಗೆ ತೃಪ್ತಿ ತಂದಿವೆ ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸುಮಾ ಬ್ಯಾಳಿ ಹೇಳಿದರು.
ಇನ್ನರ್ ವೀಲ್ ಕ್ಲಬ್ ವತಿಯಿಂದ ರವಿವಾರ ಬೆಳಿಗ್ಗೆ ಇಲ್ಲಿನ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಧನ್ಯವಾದ ಸರ್ಮಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾರ್ವಜನಿಕರು ಹಾಗೂ ಇನ್ನರ್ ವೀಲ್ ಕ್ಲಬ್ ನ ಸದಸ್ಯರ ಮತ್ತು ನನ್ನ ಕುಟುಂಬದವರ ಸಹಕಾರದಿಂದ ನನ್ನ
ಅವಧಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿದರು.
ವಿ ಕೇರ್ ಗುರಿ ಅಡಿಯಲ್ಲಿ ಶಿಕ್ಷಣ, ಪರಿಸರ, ಕಾನ್ಸರ್, ರಕ್ತ ಹಿನತೆ, ಕ್ಲಬ್ ನ ಬೆಳವಣಿಗೆ, ಮಹಿಳಾ ಆರೋಗ್ಯ ಶಿಬಿರಗಳು ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕ್ಲಬ್ ನ ಹೆಸರನ್ನು ಬೆಳಸಲಾಗಿದೆ ಎಂದು ಹೇಳಿದರು.
ಇತ್ತೀಚೆಗೆ ನಿಡಶೇಸಿ ಉದ್ಯಾನವನದಲ್ಲಿ ನಮ್ಮ ಕ್ಲಬ್ ವತಿಯಿಂದ ನಿರ್ಮಿಸಿದ ತಾಯಿ ಮತ್ತು ಮಗುವಿನ ಮಮತೆ ಬೆಳೆಸುವ ಮೂರ್ತಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಟರಾಜ ಸೋನಾರ, ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಶಾರದಾ ಶೆಟ್ಟರ್, ಗೌರಮ್ಮ ಕುಡತಿನಿ, ಡಾ.ಪಾರ್ವತಿ, ಪ್ರಭಾ ಬಂಗಾರಶೆಟ್ಟರ್, ವಂದನಾ ಗೋಗಿ, ಸುಕನ್ಯಾ ಶೆಟ್ಟರ್, ಲತಾ ಕುರ್ಮಾಚಾರಿ, ಸರೋಜಿನಿ ಮರಡಿ, ಸುವರ್ಣ ಬಳೂಟಗಿ, ವಿಜಯ ಶ್ರೀ ಬಳಿಗಾರ, ಮಾಲತಿ ನಾಯಕ, ಸವಿತಾ ಮಳಗಿ, ಗಾಯತ್ರಿ ಇಲ್ಲೂರ, ಶರಣಮ್ಮ ಅಂಗಡಿ, ಶೋಭಾ ಇಲ್ಲೂರ, ಅನೀತಾ ಗೋಗಿ, ಶಾರದಾ ಜಿಗಜಿನ್ನಿ, ಡಾ.ಕುಮದಾ ಪಲ್ಲೇದ, ಡಾ.ವೇದಾ ಪಾಟೀಲ್, ಶಶಿಕಲಾ ಕುಡತಿನಿ, ಗಿರಿಜಾ ಚಿನಿವಾಲರ, ಪೂಜಾ ಪಾಲಂಕರ್, ಶಿಲ್ಪಾ ಸುಂಕದ, ಅಡಿವೆಮ್ಮ ಹಿರೇಮಠ, ಶ್ರೀ ದೇವಿ, ಪ್ರೇಮಾ, ನಿರ್ಮಲಾ, ಬಸವರಾಜೇಶ್ವರಿ, ಸೌಮ್ಯ ಬ್ಯಾಳಿ, ಅಂಜಲಿ ಪಾಲಂಕರ್ , ವಿನುತಾ ಹೆಗಡೆ ಹಾಗೂ ಇನ್ನರ್ ವೀಲ್ ಕ್ಲಬ್ ನ ಸರ್ವ ಸದಸ್ಯರು ಭಾಗವಹಿಸಿದ್ದರು