ತಾಳಿಕೋಟಿ

ಅಧಿಕಾರದ ದುರುಪಯೋಗ ಆಗಬಾರದು: ಸಚಿವ ಪಾಟೀಲ

ಅಧಿಕಾರದ ದುರುಪಯೋಗ ಆಗಬಾರದು: ಸಚಿವ ಪಾಟೀಲ

ತಾಳಿಕೋಟಿ 16:  ಜನರ ಆಶೀರ್ವಾದದ ಮೂಲಕ ಪಡೆದ ಅಧಿಕಾರವನ್ನು ಜನಸೇವೆಗಾಗಿ ಉಪಯೋಗಿಸಬೇಕು. ಯಾರು ಅಧಿಕಾರವನ್ನು ಸಮಾಜದ ಒಳಿತಿಗಾಗಿ  ಉಪಯೋಗಿಸುತ್ತಾರೆ ಸಮಾಜ ಅಂಥವರನ್ನು ಸ್ಮರಿಸುತ್ತದೆ. ಯಾರು ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಾರೋ ಸಮಾಜ ಅವರನ್ನು ಮರೆಯುತ್ತದೆ ಎಂದು ಕಬ್ಬು ಅಭಿವೃದ್ಧಿ ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.  

ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಶ್ರೀ ಮಾಯಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ದೇಶದಲ್ಲಿ ಏನೇ ಗಾಳಿ ಇದ್ದರೂ ರಾಜ್ಯದ ಜನರು ನಮಗೆ 136 ಸ್ಥಾನಗಳನ್ನು ಕೊಟ್ಟಿದ್ದಾರೆ ಅವರ ಜನಾದೇಶವನ್ನು ಗೌರವಿಸುತ್ತಾ ನಾವು ಕೆಲಸ ಮಾಡುತ್ತಿದ್ದೇವೆ ಈಗಾಗಲೇ ಗ್ಯಾರಂಟಿ ಯೋಜನೆಗಳ ಮೂಲಕ ಬಡ ಜನರಿಗೆ ಸ್ಪಂದಿಸುವ ಕೆಲಸವನ್ನು ಮಾಡಿದ್ದೇವೆ ಮುಂದೆ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ ನಾವು ಚುನಾವಣೆ ಸಂದರ್ಭದಲ್ಲಿ ಮಾಡಿದ ಎಲ್ಲ ವಾಗ್ದಾನಗಳನ್ನು ಪೂರೈಸುತ್ತೇವೆ ನೀರಾವರಿ ಯೋಜನೆಗಳಿಗೆ ನಾವು ಒತ್ತುಕೊಟ್ಟು ಕೆಲಸ ಮಾಡುತ್ತೇವೆ ಇದು ನ್ಯಾಯಾಲಯದ ವಿಷಯವಾಗಿರುವುದರಿಂದ ಸ್ವಲ್ಪ ವಿಳಂಬವಾಗುತ್ತಿದೆ. ಆದರೂ ಆದಷ್ಟು ಬೇಗ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ವೇಗ ತರಲಿದ್ದೇವೆ ಎಂದವರು, ವಿಜಯಪುರ ಜಿಲ್ಲೆ ಎಂದು ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದು ಕಬ್ಬು ಉತ್ಪಾದನೆಯಲ್ಲಿ ರಾಜ್ಯದಲ್ಲಿ 3ನೇ ಸ್ಥಾನವಿದೆ ಇಲ್ಲಿ ಸುಮಾರು 25 ಸಕ್ಕರೆ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ನಮ್ಮ ರೈತರಿಗೆ ಶಕ್ತಿ ತುಂಬುವಂತ ಕೆಲಸ ಡಿಸಿಸಿ ಬ್ಯಾಂಕ್ ಮಾಡುತ್ತಿದೆ. ಇದರ ಒಂದು ವಿಶಿಷ್ಟ ಕಾರ್ಯಕ್ರಮ ಈ ಮಾಸದ 20ರಂದು ವಿಜಯಪುರದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಸಿಎಂ ಹಾಗೂ ಡಿಸಿಎಂ ಬರುತ್ತಿದ್ದಾರೆ ತಾವು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ಇಂದು ನೀವು ಕೊಟ್ಟ ಸನ್ಮಾನಕ್ಕೆ ನಾನು ರೂಣಿಯಾಗಿದ್ದೇನೆ. ನಿಮ್ಮ ಗ್ರಾಮದ ಗಣಿಗಾರಿಕೆ ಸಮಸ್ಯೆಯನ್ನು ಶಾಸಕ ನಾಡಗೌಡರೊಂದಿಗೆ ಸೇರಿ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.   

ಶಾಸಕ ಸಿ ಎಸ್ ನಾಡಗೌಡ ಅವರು ಮಾತನಾಡಿ ಗ್ರಾಮದ ಎಲ್ಲ ಹಿರಿಯರು ಸೇರಿ ಈ ಬಾರಿ ನನ್ನನ್ನು ಆಶೀರ್ವದಿಸಿದ್ದೀರಿ ನಿಮ್ಮ ಈ ಋಣ ನನ್ನ ಮೇಲಿದೆ ಅದರಲ್ಲೂ ಗಣ್ಯರಾದ ಜಿ .ಎಸ್‌. ಕ ಶೆಟ್ಟಿ ಅವರ ಸಹಾಯವನ್ನು ನಾನೆಂದೂ ಮರೆಯುವುದಿಲ್ಲ. ಅಧಿಕಾರವನ್ನು ನಾನು ಜನರ ಸೇವೆ ಮಾಡಲು ಸಿಕ್ಕ ಅವಕಾಶ ಎಂದು ಭಾವಿಸಿದವನು ನಾನೆಂದು, ಅಧಿಕಾರದ ದುರುಪಯೋಗ ಮಾಡಿಕೊಂಡಿಲ್ಲ ಚುನಾವಣೆ ನಂತರ ಎಲ್ಲರನ್ನು ಸಮಾನವಾಗಿ ಕಾಣುತ್ತೇನೆ. ಈ ಹಿಂದೆ ಇದ್ದವರಂತೆ ನಾನು ಡಂಬಾಚಾರದ ಪ್ರಚಾರವನ್ನು ಮಾಡುತ್ತಾ ಅಧಿಕಾರದ ದುರುಪಯೋಗ ಮಾಡಿಕೊಳ್ಳುವನಲ್ಲ ಕೇವಲ ಕೆಲವು ಸಿಸಿ ರಸ್ತೆಗಳನ್ನು ಮಾಡಿ ಅದನ್ನೇ ದೊಡ್ಡ ಅಭಿವೃದ್ಧಿ ಎಂದು ತೋರಿಸಿ ಬೇರೇನು ಮಾಡಲಿಲ್ಲ ಒಂದೇ ಒಂದು ಹೇಳಿಕೊಳ್ಳುವಂಥ ಕೆಲಸ ಮಾಡಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು. ಇಂದು ನೀವು ಮಾಡಿದ ಈ ಸನ್ಮಾನ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ನಾನು ನಿಮಗೆ ಚಿರಋಣಿಯಾಗಿರುವೆ ನಿಮ್ಮ ವಿಶ್ವಾಸಕ್ಕೆ ಧಕ್ಕೆ ಬರದ ಹಾಗೆ ಕೆಲಸ ಮಾಡುತ್ತೇನೆ ಇದಕ್ಕೆ ನಿಮ್ಮ ಸಹಕಾರ ನನಗೆ ಬೇಕು ಎಂದರು.  

ಗ್ರಾಮದ ಗಣ್ಯರಾದ ಜಿ.ಎಸ್‌. ಕಶಟ್ಟಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಚಿವ ಶಿವಾನಂದ್ ಪಾಟೀಲ್ ಶಾಸಕ ಅಪ್ಪಾಜಿ ನಾಡಗೌಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್ .ಪಾಟೀಲ ಯಾಳಗಿ ಅವರನ್ನು ಗ್ರಾಮದ ವತಿಯಿಂದ ಹಾಗೂ ಹಲವಾರು ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆ ಕಾರ್ಯಕ್ರಮದ ಮೊದಲು ಸಚಿವ ಶಿವಾನಂದ ಪಾಟೀಲ್ ಶಾಸಕ ಅಪ್ಪಾಜಿ ನಾಡಗೌಡ ಹಾಗೂ ಬಿ ಎಸ್ ಪಾಟೀಲ್ ಯಾಳಗಿ ಇವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಿಂದ ವೇದಿಕೆಗೆ ತರಲಾಯಿತು.   

ಈ ಸಮಯದಲ್ಲಿ ಗಣ್ಯರಾದ ಎಚ್‌. ಎನ್‌. ಬಿರಾದಾರ . ಇರಸಂಗಪ್ಪ ಗೌಡ  ಬಾಗೇವಾಡಿ.  ಜಿ.ಜಿ.ಯರನಾಳ. ಎಂ. ಎಸ್‌. ಮ್ಯಾಗೇರಿ. ಮುದ್ದೇಬಿಹಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ. ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ. ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ. ವಿ.ವಿ .ಸಂಘದ ಅಧ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ. ಪಿಕೆಪಿಎಸ್ ಅಧ್ಯಕ್ಷ ಡಿ .ವಿ. ಪಾಟೀಲ. ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ದಾದಾಪೀರರ್ಚೌದ್ರಿ. ಪ್ರಭುಗೌಡ ಮದರ್ಕಲ. ಸಂಗನಗೌಡ ಬಿರಾದರ. ಬಾಪುಗೌಡ ಬಿರಾದಾರ. ಚಿಂತಪ್ಪಗೌಡ ಯಾಳಗಿ .ಖಾಸಿಂ ಪಟೇಲ್ ಪಾಟೀಲ. ಸಿ.ಎಸ್‌. ಮಾಳಿ.ಲಕ್ಷ್ಮಣ್ ನಾಯಕ. ಶರಣಗೌಡ ದೇಶಮುಖ. ಇಬ್ರಾಹಿಂ ಮನ್ಸೂರ. ಸಂಗನಗೌಡ ಅಸ್ಕಿ. ಫಯಾಜ ಉತ್ನಾಳ .ದಸ್ತಗಿರ್ ಕೆಂಭಾವಿ. ವೀರೇಶ್ ಬಾಗೇವಾಡಿ ಇರಾಜ ಸರ್ ಮತ್ತಿತರರು ಇದ್ದರು 


ಸುದ್ದಿ ಓದಿ